ಮಡಿಕೇರಿ, ಜೂ. 1: ಕಳೆದ ಮಾರ್ಚ್‍ನಲ್ಲಿ ಲಾರಿಡಿಕ್ಕಿ ಪ್ರಕರಣದಲ್ಲಿ ಕೊಲೆಗೀಡಾಗಿದ್ದ ಜಿಲ್ಲಾ ಬಿಜೆಪಿ ಪ್ರಮುಖ ಹಾಗೂ ಸಂಪಾಜೆ ಗ್ರಾ.ಪಂ. ಸದಸ್ಯ ಬಾಲಚಂದ್ರ ಕಳಗಿ ಅವರ ಸಾವಿನಿಂದ ತೆರವಾಗಿದ್ದ ಸ್ಥಾನಕ್ಕೆ ನಡೆಸಲಾದ ಉಪ ಚುನಾವಣೆಯಲ್ಲಿ ಮೃತ ಕಳಗಿ ಪತ್ನಿ ರಮಾದೇವಿ ಕಳಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಈ ಕ್ಷೇತ್ರಕ್ಕೆ ಬಿಜೆಪಿಯ ಅಭ್ಯರ್ಥಿ ಹೊರತು ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ.
ಮದೆ ಗ್ರಾ.ಪಂ.ನ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಾಳೇರಮ್ಮನ ಅಶೋಕ್ ಅಯ್ಯಣ್ಣ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಅಂತೆಯೇ ಹಾತೂರು ಗ್ರಾ.ಪಂ.ನ ಒಂದು ಸ್ಥಾನಕ್ಕೆ ಜೆ.ಕೆ. ಸುರೇಶ್ ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.