ಶ್ರೀಮಂಗಲ, ಮೇ 31 : ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ಆಶ್ರಯದಲ್ಲಿ ಜೂ. 2ರಂದು ವೀರಾಜಪೇಟೆಯಲ್ಲಿ ರಾಜ್ಯಮಟ್ಟದ ಕೊಡವ ಕವಿಗೋಷ್ಠಿ ಆಯೋಜಿಸಲಾಗಿದೆ.
ವೀರಾಜಪೇಟೆಯ ಮಲಬಾರ್ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ “ಕವಿವೊರ್ಮೆ” ಹೆಸರಿನ ಕಾರ್ಯಕ್ರಮದಲ್ಲಿ ಕವನ ವಾಚನ, ಗಾಯನ ಆಯೋಜಿಸಲಾಗಿದ್ದು, ಆಯ್ದ 25 ಕೊಡವ ಕವಿಗಳು ತಮ್ಮ ಸ್ವ ರಚಿತ, ಕವನ ವಾಚಿಸುವದರೊಂದಿಗೆ ಗೀತಗಾಯನವನ್ನು ಏರ್ಪಡಿಸಲಾಗಿದೆ.
ಅಧ್ಯಕ್ಷತೆಯನ್ನು ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯೆ ಬೊಪ್ಪಂಡ ಜೂನ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕಾತೀರ ಬೋಪಯ್ಯ ಭಾಗವಹಿಸಲಿದ್ದಾರೆ. ಹಿರಿ-ಕಿರಿಯ ಕವಿಗಳ ಸಮ್ಮಿಲನದ ಈ ಕಾರ್ಯಕ್ರಮದ ಸಂಚಾಲಕರಾಗಿ ‘ಕೂಟ’ದ ಸದಸ್ಯ ಕೋಟೇರÀ ಉದಯ ಪೂಣಚ್ಚ ಕಾರ್ಯನಿರ್ವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ 9880584732, 9448326014 ಮತ್ತು 8553997051 ಸಂಖ್ಯೆಯನ್ನು ಸಂಪರ್ಕಿಸಬಹುದೆಂದು ಕೂಟದ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ತಿಳಿಸಿದ್ದಾರೆ.