ಮಡಿಕೇರಿ, ಜೂ. 1: ಹಿತರಕ್ಷಣಾ ವೇದಿಕೆ ಮಹಾ ಸಭೆ ನಗರದ ಮಹಿಳಾ ಸಮಾಜದ ಹತ್ತಿರ ಇರುವ ಎನ್.ಜಿ.ಓ. ಸಭಾಂಗಣದಲ್ಲಿ ವೇದಿಕೆಯ ಅಧ್ಯಕ್ಷ ರವಿಗೌಡ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಗೆ ಮುಖ್ಯ ಅತಿಥಿಗಳಾಗಿ ಈ ವೇದಿಕೆಯ ಕಾನೂನು ಸಲಹೆಗಾರರು ಹಿರಿಯ ವಕೀಲರು ಆದ ಕೆ.ಎಂ. ಕುಂಞ ಅಬ್ದುಲ್ಲಾ ಪಾಲ್ಗೊಂಡಿದ್ದರು. ಈ ವೇದಿಕೆಯ ನ್ಯಾಯ ಬದ್ಧ ಹೋರಾಟಕ್ಕೆ ಕಾನೂನು ರೀತಿಯಲ್ಲಿ ಇರುವ ಅವಕಾಶಗಳ ಬಗ್ಗೆ ಅವರು ಮಾಹಿತಿ ಕೊಟ್ಟರು. ಸಭೆಯ ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಅಧ್ಯಕ್ಷ ರವಿಗೌಡ ಮಾತನಾಡಿ, ಮಡಿಕೇರಿ ಹಿತರಕ್ಷಣಾ ವೇದಿಕೆಯ ಮುಖ್ಯ ಉದ್ದೇಶ ಇದರ ಅಗತ್ಯತೆ ಮತ್ತು ಈ ವೇದಿಕೆಗೆ ಪ್ರತಿಯೊಬ್ಬರ ಸಹಕಾರ ಬೇಕು ಎಂದರು. ಮಡಿಕೇರಿ ನಗರದ ಜನರ ಬೆಂಬಲ ಕೂಡ ಅಗತ್ಯ ಇದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ 2018-2019ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 98 ರಷ್ಟು ಅಂಕ ಪಡೆದ ಮೌನ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ರಕ್ತದಾನ ಬಗ್ಗೆ ವಿಶೇಷ ಸೇವೆಯನ್ನು ಮಾಡುತ್ತಿರುವ ವೇದಿಕೆಯ ಸದಸ್ಯರಾದ ಸಮೀರ್ ಅವರನ್ನು ಮತ್ತು ಮಹಮ್ಮದ್ ಅನ್ಜುಮ್ ಅವರ ಅನುಪಸ್ಥಿತಿಯಲ್ಲಿ ಅವರ ತಾಯಿ ಅವರನ್ನು ಗೌರವಿಸಲಾಯಿತು.

ವೇದಿಕೆಯ ನಿರ್ದೇಶಕ ಮೌನ ಅವರ ತಂದೆ ಲಕ್ಷ್ಮಿ ಪ್ರಸಾದ್ ಪೆರ್ಲ, ತಾಯಿ ಭಾರತಿ ಉಪಸ್ಥಿತರಿದ್ದರು. ಸ್ವಾಗತವನ್ನು ಮಿನಾಸ್ ಪ್ರವೀಣ್ ನಿರ್ವಹಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಮೈಕಲ್ ವೆಗಾಸ್ ನೆರವೇರಿಸಿದರು. ವೇದಿಕೆಯ ಉಪಾಧ್ಯಕ್ಷ ವಿನು ವಂದಿಸಿದರು.

ಸಭೆಯಲ್ಲಿ ಮುಂದಿನ ದಿನಗಳಲ್ಲಿ ವೇದಿಕೆಯ ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡಿ ರೂಪುರೇಶೆ ಸಿದ್ಧತೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಡಿಕೇರಿ ಹಿತರಕ್ಷಣಾ ವೇದಿಕೆ ಸದಸ್ಯರು ಹಾಜರಿದ್ದು, ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯಲಾಯಿತು.