ಬೆಂಗಳೂರು, ಮೇ 30: 2018-19ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಸಪ್ಲಿಮೆಂಟರಿ ಪರೀಕ್ಷೆ ಜೂನ್ 11 ರಿಂದ 20 ರವರೆಗೆ ನಡೆಯಲಿದೆ.

11 ರಂದು ಬೆಳಿಗ್ಗೆ ಸೋಶಿಯಾಲಜಿ, ಅಕೌಂಟೆನ್ಸಿ, ಗಣಿತ, ಮಧ್ಯಾಹ್ನದ ಬಳಿಕ ಹೋಂಸೈನ್ಸ್, ತಾ. 12 ರಂದು ಬೆಳಿಗ್ಗೆ ಇಂಗ್ಲೀಷ್, ಐಟಿ, ಆಟೋಮೊಬೈಲ್, ಹೆಲ್ತ್‍ಕೇರ್, ಬ್ಯೂಟಿ ಅಂಡ್ ವೆಲ್‍ನೆಸ್, 13 ರಂದು ಬೆಳಿಗ್ಗೆ ಎಕನಾಮಿಕ್ಸ್, ಫಿಸಿಕ್ಸ್, ಮಧ್ಯಾಹ್ನದ ಬಳಿಕ ಸೈಕಾಲಜಿ, 14 ರಂದು ಬೆಳಿಗ್ಗೆ ಕನ್ನಡ, ಅಪೂನಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಮಧ್ಯಾಹ್ನ ಮೇಲೆ ಜಿಯೋಗ್ರಫಿ, ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ಜಿಯಾಲಜಿ, 15 ರಂದು ಬೆಳಿಗ್ಗೆ ಕನ್ನಡ, ಮಧ್ಯಾಹ್ನ ಬಳಿಕ ಉರ್ದು, ಸಂಸ್ಕøತ, 17 ರಂದು ಬೆಳಿಗ್ಗೆ ಲಾಜಿಕ್, ಬಿಸಿನೆಸ್ ಸ್ಟಡೀಸ್, ಕೆಮಿಸ್ಟ್ರಿ, ಎಜುಕೇಶನ್, 18 ರಂದು ಹಿಸ್ಟರಿ, ಸ್ಟ್ಯಾಟಿಟಿಕ್ಸ್, ಬಯಾಲಜಿ, 19 ರಂದು ಪೊಲಿಟಿಕಲ್ ಸೈನ್ಸ್, ಬೇಸಿಕ್ ಮ್ಯಾಥ್ಸ್, 20 ರಂದು ಬೆಳಿಗ್ಗೆ ಹಿಂದಿ, ಮಧ್ಯಾಹ್ನ ಮೇಲೆ ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್, ಫ್ರೆಂಚ್ ಭಾಷೆಗಳ ಪರೀಕ್ಷೆ ನಡೆಯಲಿದೆ ಎಂದು ಪ.ಪೂ. ಶಿಕ್ಷಣ ಇಲಾಖೆ ನಿರ್ದೇಶಕಿ ಶಿಖಾ ಸುತ್ತೋಲೆ ಹೊರಡಿಸಿದ್ದಾರೆ.