ಸೋಮವಾರಪೇಟೆ, ಮೇ 30: ಗ್ರಾಹಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇಲ್ಲಿನ ಸೋಮೇಶ್ವರ ದೇವಾಲಯದ ಬಳಿ ನೂತನವಾಗಿ ತೆರೆಯಲಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕ ಸೇವಾ ಕೇಂದ್ರಕ್ಕೆ ತಾ. 31ರಂದು (ಇಂದು) ಚಾಲನೆ ದೊರೆಯಲಿದೆ.

ಸೋಮೇಶ್ವರ ದೇವಾಲಯದ ಬಳಿಯಿರುವ ಶ್ರೀಮೂಕಾಂಬಿಕ ಕಂಪ್ಯೂಟರ್ಸ್ ಸೆಂಟರ್‍ನಲ್ಲಿ ಸ್ಥಾಪಿಸಿರುವ ಸೇವಾಕೇಂದ್ರಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಲಿದ್ದಾರೆ. ವಿರಕ್ತ ಮಠಾಧೀಶರಾದ ಶ್ರೀವಿಶ್ವೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಸೇವಾ ಕೇಂದ್ರದ ಮುಖ್ಯಸ್ಥ ಎಸ್.ಚಂದ್ರು ತಿಳಿಸಿದ್ದಾರೆ.