ಕೂಡಿಗೆ, ಮೇ 30: ಶೂನ್ಯ ಬಂಡಾ ವಳ ಹೂಡಿಕೆಯಲ್ಲಿ ನೈಸರ್ಗಿಕ ಕೃಷಿ ಪದ್ಧತಿ ಯನ್ನು ಅಳವಡಿಸಿ ಕೊಂಡು ರೈತರು ಕೃಷಿ ಮಾಡುವ ಬಗ್ಗೆ ಮಾಹಿತಿ ಕಾರ್ಯಾಗಾರ ಕೃಷಿ ಇಲಾಖೆ ವತಿಯಿಂದ ಹುಲಸೆ ಗ್ರಾಮದಲ್ಲಿ ನಡೆಯಿತು.
ಶಿರಸಿಯ ತೋಟಗಾರಿಕಾ ಮಹಾ ವಿದ್ಯಾಲಯದ ಸಂಶೋದನ ನಿರ್ದೇಶಕರಾದ ಡಾ. ಎನ್. ಬಸವರಾಜ್ ಅವರು ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡುತ್ತಾ, 9 ಹೆಕ್ಟೇರ್ ಪ್ರದೇಶದಲ್ಲಿ 53 ರೈತರು ಈ ಯೋಜನೆಯಡಿಯನ್ನು ಅಳವಡಿಸಿಕೊಂಡು ಕೃಷಿ ಮಾಡುವ ರೈತರಿಗೆ ನೈಸರ್ಗಿಕ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಅದರಲ್ಲಿ ಹುಲುಸೆ ಗ್ರಾಮದ ರೈತರು ಕೂಡಾ ಈ ಪದ್ಧತಿಯನ್ನು ಅಳವಡಿಸಿಕೊಂಡಿರುವದರ ಬಗ್ಗೆ ಶ್ಲಾಘಿಸಿದರು. ಅನುಸರಿಸಬೇಕಾದ ಪದ್ಧತಿಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಶಿರಸಿಯ ಸಹ ಸಂಶೋಧಕ ಡಾ. ಆರ್ ಸೋಮು ಅವರು ಬೀಜಾಮೃತದ ಮತ್ತು ಬೀಜೋಪಚಾರದ ಬಗ್ಗೆ ಹಾಗೂ ಶೂನ್ಯ ಬಂಡವಾಳದಿಂದ ಕೃಷಿ ಮಾಡುವ ಬಗ್ಗೆ ಮಾಹಿತಿ ನೀಡಿದರು. ಶೂನ್ಯ ಬಂಡವಾಳದಲ್ಲಿ ನೈಸರ್ಗಿಕವಾಗಿ ಸಿಗುವ ಮರದ ಎಲೆಗಳನ್ನು ಸಾವಯವ ಗೊಬ್ಬರಕ್ಕೆ ಬಳಸುವ ಬಗ್ಗೆ, ಸಾವಯವ ಗೊಬ್ಬರ ತಯಾರಿಕೆ, ಎರೆಹುಳು ಗಳನ್ನು ಉತ್ಪಾದಿಸುವ ಯೋಜನೆಯ ಬಗ್ಗೆ ಸಮಗ್ರ ಮಾಹಿತಿಯನ್ನು ರೈತರಿಗೆ ನೀಡಿದರು.
ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಡಾ. ಹೆಚ್.ಎಸ್. ರಾಜಶೇಖರ್ ಅವರು ಶೂನ್ಯ ಬಂಡವಾಳದಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಶೇ. 90 ರಷ್ಟು ಸಹಾಯಧನದಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪಿ.ಸಿ. ಪೂಣಚ್ಚ ಹಾಗೂ ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಜೆ.ಸಿ. ಶಾರದ ಮತ್ತು 50 ರೈತರು ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಂಡರು.
ಜಿಲ್ಲೆಯ ಸಿಆರ್ಪಿ ಸಿಎ ನಂಜಪ್ಪನವರು ಸ್ವಾಗತಿಸಿ, ಡಿಆರ್ಪಿ ಕಪ್ಪಿನಪ್ಪ ಅವರು ವಂದಿಸಿದರು.