ಸಿದ್ದಾಪುರ, ಮೇ 29: ಟೀಂ 53 ವತಿಯಿಂದ ಇಲ್ಲಿನ ಚೇಂದಂಡ ಚಿಮ್ಮಿ ಪೂವಯ್ಯ ಅವರ ಗದ್ದೆಯಲ್ಲಿ ನಡೆದ ರಾಷ್ಟ್ರ ಮಟ್ಟದ ನಾಲ್ಕು ಚಕ್ರದ ಟ್ರ್ಯಾಕ್ ರೇಸ್‍ನಲ್ಲಿ ಡೆನ್ ತಿಮ್ಮಯ್ಯ ಅತಿ ವೇಗದ ಚಾಲಕ ಬಹುಮಾನವನ್ನು ಪಡೆದು ಕೊಂಡಿದ್ದು, ಟೀಂ 53 ರೇಸ್ ಚಾಂಪಿಯನ್ ಪಟ್ಟವನ್ನು ಬಿ.ಜೆ. ರೂಪೇಶ್ ಅಲಂಕರಿಸಿದ್ದಾರೆ.

ವಿವಿಧ ಕ್ಲಾಸ್‍ಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಜಿಲ್ಲೆಯೂ ಸೇರಿದಂತೆ ಹೊರ ರಾಜ್ಯಗಳಿಂದಲು ರ್ಯಾಲಿ ಪಟುಗಳು ಭಾಗವಹಿಸಿ ಬಹುಮಾನ ಪಡೆದುಕೊಂಡರು.

800 ಕ್ಲಾಸ್‍ನಲ್ಲಿ ವಿವೇಕ್ ಮೂಡಿಗೆರೆ ಪ್ರಥಮ, ಚೋಮಂಡ ಸೋಮಣ್ಣ ದ್ವಿತೀಯ ಬಹುಮಾನ ಪಡೆದರೆ, 1100 ಕ್ಲಾಸ್‍ನಲ್ಲಿ ಸೋಮಣ್ಣ ಸಿ.ಕೆ. (ಪ್ರ) ದೀರಜ್ (ದ್ವಿ) 1400 ಕ್ಲಾಸ್ ಇಸ್ಮಾಯಿಲ್ (ಪ್ರ) ಐಯತ್ತ್ ಮುನ್ನಾ (ದ್ವಿ) 1600 ಕ್ಲಾಸ್ ಧ್ರುವ ಚಂದ್ರಶೇಖರ್ (ಪ್ರ) ರೂಪೇಶ್ (ದ್ವಿ) ಕೂರ್ಗ್ ಓಪನ್ ಕ್ಲಾಸ್ ಕೋರವಂಡ ತಿಮ್ಮಯ್ಯ (ಪ್ರ) ಮಂಜುನಾಥ್ ಬಿ.ಕೆ (ದ್ವಿ) ನೋನಿಸ್ ಕ್ಲಾಸ್ ಮಂಜುನಾಥ ಬಿ.ಕೆ. (ಪ್ರ) ಅಂಕಿತ ಪೊನ್ನಪ್ಪ (ದ್ವಿ) ರೋಲ್ ಗೇಜ್ ಕ್ಲಾಸ್ ರೂಪೇಶ್ ಬಿ.ಜೆ. (ಪ್ರ) ಮಂಜುನಾಥ್ ಡಿ.ಕೆ (ದ್ವಿ) ಆನ್ರಿಸ್ಟೆಕ್ಟಡ್ ಕ್ಲಾಸ್ ಡೆನ್ ತಿಮ್ಮಯ್ಯ (ಪ್ರ) ಮಂಜುನಾಥ್ .ಡಿ.ಕೆ (ದ್ವಿ) ಇಂಡಿಯನ್ ಓಪನ್ ಕ್ಲಾಸ್ ಬಿ.ಜೆ.ರೂಪೇಶ್ (ಪ್ರ) ಡೆನ್ ತಿಮ್ಮಯ್ಯ (ದ್ವಿ) ಜಿಪ್ಸಿ ಓಪನ್ ಕ್ಲಾಸ್ ಗಗನ್ ಕರುಂಬಯ್ಯ (ಪ್ರ) ಸಚಿನ್ ಮೂರ್ತಿ (ದ್ವಿ) ಜಿಪ್ ಕ್ಲಾಸ್ ಅತುಲ್ ಥೋಮಸ್ (ಪ್ರ) ಐಚೆಟ್ಟೀರ ನಾಣಯ್ಯ (ದ್ವಿ) ಲೇಡಿಸ್ ಕ್ಲಾಸ್ ಹರ್ಷಿತಾ ಗೌಡ (ಪ್ರ), ಸಿಯಾನ್ ಸ್ವೀಕೇರಾ (ದ್ವಿ) ಸ್ಥಾನಗಳನ್ನು ಪಡೆದರು.

ಕಾರ್ಯಕ್ರಮದಲ್ಲಿ ಟೀಂ 53 ಅಧ್ಯಕ್ಷ ಚೇಂದಂಡ ಚಿಮ್ಮಿ ಪೂವಯ್ಯ, ಅತಿಥಿಗಳಾಗಿ ವಿ.ಕೆ.ಲೋಕೆಶ್, ಜೊಸೇಫ್ ಶ್ಯಾಂ, ಸಂತೋಷ್ ಸ್ವೀಕೇರಾ, ಜೋಸೇಫ್ ಶ್ಯಾಂ ಸೇರಿದಂತೆ ಗಣ್ಯರು ವಿಜೇತರಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಆರ್. ಸುಬ್ರಮಣಿ ಅವರನ್ನು ಟೀಂ 53 ಜರ್ನಲಿಸ್ಟ್ ಆಫ್ ದಿ ಇಯರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.