ಚೆಟ್ಟಳ್ಳಿ, ಮೇ 28: ತಲಕಾವೇರಿ ಕುಂಡಿಕೆಯ ಬಳಿ ಅರ್ಚಕರಿಗೆ ಪೂಜೆ ಸಲ್ಲಿಸಲು ಅನುಕೂಲವಾಗುವಂತೆ ಮಳೆ, ಬಿಸಿಲು ಗಾಳಿಯಿಂದ ರಕ್ಷಣೆ ಪಡೆದು ಹಾಗೂ ದೇವರ ಕುಂಡಿಕೆಗೆ ರಾತ್ರಿಯ ವೇಳೆ ಮುಚ್ಚಲು ಒಂದು ಲೋಹದ ಮುಚ್ಚಳಿಕೆಯನ್ನು 75 ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸ್ಟೈನ್‍ಲೆಸ್ ಸ್ಟೀಲ್ ಲೋಹದಲ್ಲಿ ನಿರ್ಮಿಸಿ ಇಂದು ದೇವಸ್ಥಾನದ ಆಡಳಿತ ಮಂಡಳಿಗೆ ದೇವರ ಸನ್ನಿದಿಯಲ್ಲಿ ಮಣವಟ್ಟೀರ ಕುಟುಂಬಸ್ಥರು ಒಪ್ಪಿಸಿದರು.
ಈ ಸಂದರ್ಭ ಮಣವಟ್ಟೀರ ಕುಟುಂಬಸ್ಥರು ಹಾಗೂ ಪಟ್ಟಮಾಡ ಕುಟುಂಬಸ್ಥರು ಹಾಜರಿದ್ದರು.