ಸುಂಟಿಕೊಪ್ಪ, ಮೇ 28: ಬ್ಲೂ ಬಾಯ್ಸ್ ಯುವಕ ಸಂಘದ ವತಿಯಿಂದ ನಡೆಯುತ್ತಿರುವ ಡಿ.ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಪಂದ್ಯಾಟದ 5ನೇ ದಿನದ ಪಂದ್ಯಾವಳಿಯಲ್ಲಿ ನಂಜನಗೂಡು ಎಫ್.ಸಿ. ನಂಜನಗೂಡು ಮತ್ತು ಬ್ಲೂ ಬಾಯ್ಸ್ ಎಫ್.ಸಿ. ಸುಂಟಿಕೊಪ್ಪ ಈ 2 ಎರಡು ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಬ್ಲೂಬಾಯ್ಸ್ ತಂಡದ ವಿರುದ್ಧ 10-9 ಗೋಲುಗಳಿಂದ ನಂಜನಗೂಡು ತಂಡ ಜಯ ಗಳಿಸಿತು
ಇಲ್ಲಿನ ಜಿಯಂಪಿ ಶಾಲಾ ಮೈದಾನದಲ್ಲಿ ಮೊದಲ ಪಂದ್ಯಾವಳಿಯಲ್ಲಿ ಬ್ಲೂ ಬಾಯ್ಸ್ ಎಫ್.ಸಿ. ಸುಂಟಿಕೊಪ್ಪ ಮತ್ತು ನಂಜನಗೂಡು ಎಫ್.ಸಿ. ನಂಜನಗೂಡು ನಡುವೆ ನಡೆದ ಮೊದಲಾರ್ಧದ ಪಂದ್ಯದಲ್ಲ್ಲಿ ಎರಡು ತಂಡಗಳಿಗೆ ಉತ್ತಮ ಅವಕಾಶಗಳು ದೊರೆತರೂ ಗೋಲುಗಳಿಸುವಲ್ಲಿ ವಿಫಲಗೊಂಡವು. ನಂತರ ದ್ವಿತೀಯಾರ್ಧದಲ್ಲಿ ಎರಡೂ ತಂಡಗಳು ಹೊಂದಾಣಿಕೆಯ ಆಟದಿಂದ ಸತತ ಪ್ರಯತ್ನ ಪಟ್ಟರೂ ಎರಡು ತಂಡಕ್ಕೂ ಗೋಲು ಗಳಿಸುವ ಹಲವು ಅವಕಾಶಗಳಿದ್ದರೂ, ಗೋಲುಪಟ್ಟಿಯೊಳಗೆ ಸೇರಿಸುವಲ್ಲಿ ವಿಫಲವಾಗಿ ಕ್ರೀಡಾಭಿಮಾನಿಗಳನ್ನು ಇನ್ನಷ್ಟು ತುದಿಗಾಲಿನಲ್ಲಿ ನಿಲ್ಲಿಸಿದವು. ಎರಡು ತಂಡಗಳೂ ಗೋಲು ಗಳಿಸುವಲ್ಲಿ ವಿಪಲಗೊಂಡ ಕಾರಣ ಟೈ ಬ್ರೇಕರ್‍ನಲ್ಲಿ 10-9 ಗೋಲುಗಳಿಂದ ನಂಜನಗೂಡು ತಂಡ ಜಯದ ನಗೆ ಬೀರಿತು.