ಮಡಿಕೇರಿ, ಮೇ 26: ಗೋಣಿಕೊಪ್ಪಲುವಿನ ಪಾಲಿಬೆಟ್ಟ ರಸ್ತೆ ಬದಿ ನಿವಾಸಿ ಮನೋಜ್ ಎಂಬವರ ಪತ್ನಿ ಟಿ.ಎನ್. ರಮ್ಯ (29) ಎಂಬಾಕೆ ತಾ. 17 ರಿಂದ ತನ್ನ ಮಗುವಿನೊಂದಿಗೆ ನಾಪತ್ತೆಯಾಗಿರುವದಾಗಿ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಸುಳಿವು ಲಭಿಸಿದವರು ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದ್ದು, ಗೋಣಿಕೊಪ್ಪಲು ಠಾಣೆ 08274-247333 ಅಥವಾ ಜಿಲ್ಲಾ ಪೊಲೀಸ್ ವರಿಷ್ಠರ ಕಚೇರಿ 08272-229000ಗೆ ಮಾಹಿತಿಗೆ ಕೋರಿದ್ದಾರೆ.