ವೀರಾಜಪೇಟೆ, ಮೇ 26: ವೀರಾಜಪೇಟೆ ಬಿಲ್ಲವ ಸೇವಾ ಸಂಘದಿಂದ ಆಯೋಜಿಸಿದ್ದ 18ನೇ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ ತಾ. 26ರಂದು (ಇಂದು) ಅಪರಾಹ್ನ 2 ಗಂಟೆಗೆ ನಡೆಯಲಿದೆ. ಸಂಘದ ಕ್ರೀಡಾಕೂಟ ವನ್ನು ತಾ. 11ರಂದು ಉದ್ಘಾಟಿಸಲಾಗಿದ್ದು, ಸಮಾರೋಪ ಬಿಟ್ಟಂಗಾಲ ಗ್ರಾಮದ ಅಂಬಟ್ಟಿಯಲ್ಲಿರುವ ಸಂಘದ ಆವರಣ ದಲ್ಲಿ ನಡೆಯಲಿದ್ದು, ಮಕ್ಕಳ ಕ್ರೀಡಾಕೂಟ ಬೆಳಿಗ್ಗೆ 9 ಗಂಟೆಯಿಂದ ಪ್ರಾರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.