ವೀರಾಜಪೇಟೆ, ಮೇ 24: ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭಾರೀ ಬಹುಮತ ಪಡೆದು ಜಯಭೇರಿ ಗಳಿಸಿದ ಹಿನ್ನೆಲೆ ವೀರಾಜಪೇಟೆ ಬಳಿಯ ಅಮ್ಮತ್ತಿ-ಕಾರ್ಮಾಡು ವ್ಯಾಪ್ತಿಯ ಬಿ.ಜೆ.ಪಿ. ಕಾರ್ಯಕರ್ತರು ರಾತ್ರಿ 8 ಗಂಟೆಗೆ ಮಳೆಯ ನಡುವೆಯು ಪಟ್ಟಣದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವವನ್ನು ಆಚರಿಸಿದರು.
ಈ ಸಂದರ್ಭ ಬಿಜೆಪಿ ತಾಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿ ಸುವಿನ್ ಗಣಪತಿ ಮಾತನಾಡಿ, ಐತಿಹಾಸಿಕ ಗೆಲವನ್ನು ಸಾಧಿಸಿದ ನರೇಂದ್ರ ಮೋದಿ ಅವರ ಜನಪರ ಯೋಜನೆಗಳನ್ನು ಮೆಚ್ಚಿ ಮತದಾರರು ಒಲವು ತೋರಿದ್ದಾರೆ. ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಪ್ರತಾಪ್ ಸಿಂಹ ಕೊಡಗನ್ನು ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಲಿದ್ದಾರೆ ಎಂದರು.
ವಿಜಯೋತ್ಸವದಲ್ಲಿ ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಮುಕೊಂಡ ಬೋಸ್ ದೇವಯ್ಯ, ರೈತ ಸಂಘದ ಅಧ್ಯಕ್ಷ ಕೆ.ಯು. ಗಣಪತಿ, ಮುಕ್ಕಾಟಿರ ಕಿಟ್ಟು ಮಾದಪ್ಪ, ಐನಂಡ ಜಪ್ಪು ಅಚ್ಚಪ್ಪ, ವಿ.ಎಸ್.ಎಸ್.ಎನ್. ಅಧ್ಯಕ್ಷ ಕುಟ್ಟಂಡ ವಿನು ಪೂವಯ್ಯ, ಮುಕ್ಕಾಟಿರ ಸಂತೋಷ್ ಹಾಗೂ ಪಕ್ಷದ ಕಾರ್ಯಕರ್ತರುಗಳು ಭಾಗವಹಿಸಿದ್ದರು.