ಮಡಿಕೇರಿ, ಮೇ 24: ಜಿಲ್ಲಾಡಳಿತ ವತಿಯಿಂದ 2018ರ ಪ್ರಕೃತಿ ವಿಕೋಪದಲ್ಲಿ ಸಂಭವಿಸಿದ ಮನೆ ಹಾನಿ, ಬೆಳೆ ಹಾನಿ, ಜಮೀನು ನಷ್ಟ ಸಂಬಂಧಿಸಿದ ಪರಿಹಾರ ಪಡೆಯುವಲ್ಲಿ ಸಮಸ್ಯೆ ಇದ್ದಲ್ಲಿ ಬಗೆಹರಿಸುವ ಉದ್ದೇಶದಿಂದ ತಾ. 27 ರಿಂದ 29 ರವರೆಗೆ ಆಯಾಯ ದಿನಗಳಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ರವರೆಗೆ ಜಿಲ್ಲಾಧಿಕಾರಿಗಳ ಕಚೇರಿಯ ಕೊಠಡಿ ಸಂಖ್ಯೆ 32ರಲ್ಲಿ ‘ಪರಿಹಾರ ಅದಾಲತ್ತು’ ನಡೆಯಲಿದೆ.
ಹಾಜರುಪಡಿಸಬೇಕಾದ ದಾಖಲೆಗಳು: ಪರಿಹಾರ ಪಾವತಿ ಅರ್ಜಿಯೊಂದಿಗೆ ಸಲ್ಲಿಸಿದ ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ನ ಜೆರಾಕ್ಸ್ ಪ್ರತಿ. ಪರಿಹಾರ ಸಂಬಂಧ ಮಾಹಿತಿಯನ್ನು ಆಧಾರ್ ಸಂಖ್ಯೆ ದಾಖಲಿಸಿ hಣಣಠಿ://ಠಿಚಿಡಿihಚಿಡಿಚಿ.ಞಚಿಡಿಟಿಚಿಣಚಿಞಚಿ.gov.iಟಿರಲ್ಲಿ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.