ಮಡಿಕೇರಿ, ಮೇ 24: ಪ್ರಸಕ್ತ (2019-20) ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಸುತ್ತಿರುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕರ ಹಾಗೂ ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ನಿಲಯ ಮೇಲ್ವಿಚಾರಕ ಹುದ್ದೆಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲು ಅರ್ಹ ಸರ್ಕಾರಿ ನಿವೃತ್ತ ಹಾಸ್ಟೆಲ್ ವಾರ್ಡನ್, ನಿವೃತ್ತ ಸಹ ಶಿಕ್ಷಕರು, ಬಿ.ಇಡಿ, ನಿವೃತ್ತ ಮೇಲ್ವಿಚಾರಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಡಿಕೇರಿ ತಾಲೂಕಿನ ಪಾರಾಣೆ, ಸಂಪಾಜೆ, ಮಡಿಕೇರಿ, ಮರಗೋಡು, ಭಾಗಮಂಡಲ, ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ, ಆಲೂರು ಸಿದ್ದಾಪುರ, ಕುಶಾಲನಗರ, ಸುಂಟಿಕೊಪ್ಪ ಮತ್ತು ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪಲು, ವೀರಾಜಪೇಟೆ, ಪೊನ್ನಂಪೇಟೆ, ಹುದಿಕೇರಿ, ಶ್ರೀಮಂಗಲ ಮತ್ತು ಬಿರುನಾಣಿ ಇಲ್ಲಿ ತಾತ್ಕಾಲಿಕವಾಗಿ ನಿಲಯದ ಮೇಲ್ವಿಚಾರಕರ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಡಿಕೇರಿ ಇವರಿಗೆ ತಾ. 31 ರೊಳಗೆ ಸಲ್ಲಿಸಬಹುದು.
ಅರ್ಹತೆಗಳು: ನಿವೃತ್ತ ನೌಕರರ ವಿರುದ್ಧ ಇಲಾಖಾ ವಿಚಾರಣೆ ಕೇಸ್‍ಗಳು ಬಾಕಿ ಇರಬಾರದು, ಸರ್ಕಾರಿ ನಿವೃತ್ತ ಹಾಸ್ಟೆಲ್ ವಾರ್ಡನ್, ನಿವೃತ್ತ ಸಹ ಶಿಕ್ಷಕರು-ಬಿ.ಇಡಿ, ನಿವೃತ್ತ ಕಚೇರಿ ಮೇಲ್ವಿಚಾರಕರು ಮಾತ್ರ ಅರ್ಹರಾಗಿರುತ್ತಾರೆ, ನಿವೃತ್ತ ನೌಕರರು ದೇಹದಾಢ್ರ್ಯತೆ ಬಗ್ಗೆ ಜಿಲ್ಲಾ ಸರ್ಜನ್‍ರಿಂದ ದೃಢೀಕರಿಸಿದ ಪತ್ರವನ್ನು ಸಲ್ಲಿಸಬೇಕು. ನಿವೃತ್ತ ನೌಕರರು ಅವರ 63 ವರ್ಷ ತುಂಬುವವರೆಗೆ ಮಾತ್ರ ಮುಂದುವರೆಸಬಹುದಾಗಿದೆ. ಹುಟ್ಟಿದ ದಿನಾಂಕವನ್ನು ದೃಢೀಕರಿಸುವ ಪ್ರಮಾಣ ಪತ್ರದ ಪ್ರತಿ ಲಗತ್ತಿಸಬೇಕು. ಪ್ರತೀ ವರ್ಷ ಅವರ ನಡತೆ, ಕಾರ್ಯನಿರ್ವಹಣೆ, ಅರ್ಹತೆಯನ್ನು ಪರಿಗಣಿಸಿ ನವೀಕರಿಸಲಾಗುವದು, ಅರ್ಜಿಯೊಂದಿಗೆ ನಿವೃತ್ತಿಯ ಕೊನೆಯ ಮಾಹೆಯ ವೇತನ ಪ್ರಮಾಣ ಪತ್ರ, ಹಾಲಿ ಪಡೆಯುತ್ತಿರುವ ನಿವೃತ್ತಿ ವೇತನದ ದೃಢೀಕೃತ ಪ್ರತಿಯನ್ನು ಸಲ್ಲಿಸುವದು. ಗುತ್ತಿಗೆ ಆಧಾರದ ನೌಕರರು ವರ್ಷಕ್ಕೆ 15 ದಿವಸಗಳ ಸಾಂದರ್ಭಿಕ ರಜೆ ಮಾತ್ರ ಪಡೆಯಬಹುದು, ಸರ್ಕಾರಿ ಹಣ ದುರುಪಯೋಗಪಡಿಸಿದ್ದಲ್ಲಿ ವಸೂಲಾತಿ ಮಾಡಲಾಗುವದು ಹಾಗೂ ಜಿಲ್ಲಾ ಸಮಿತಿಯು ವಿಧಿಸುವ ಇನ್ನಿತರ ಅರ್ಹತೆಗಳಿಗೆ ಒಳಪಟ್ಟಿರಬೇಕು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ದೇವರಾಜು ಅರಸು ಭವನ, ಜನರಲ್ ತಿಮ್ಮಯ್ಯ ಕ್ರೀಡಾಂಗಣ, ಮ್ಯಾನ್ಸ್ ಕಾಂಪೌಂಡ್ ಹತ್ತಿರ ಮಡಿಕೇರಿ, ದೂರವಾಣಿ ಸಂಖ್ಯೆ 08272-225628 ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅವಿನ್ ಅವರು ತಿಳಿಸಿದ್ದಾರೆ.
ಸಹಕಾರ ಡಿಪ್ಲೋಮ ತರಬೇತಿಗೆ
ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‍ಮೆಂಟ್, ಮಡಿಕೇರಿ ತರಬೇತಿ ಸಂಸ್ಥೆಯ ವತಿಯಿಂದ 6 ತಿಂಗಳ ಅವಧಿಯ ಡಿಪ್ಲೋಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕೊಡಗು ಮತ್ತು ಹಾಸನ ಜಿಲ್ಲೆಗಳ ಕನಿಷ್ಟ ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆ ಹೊಂದಿರುವ ಸಾಮಾನ್ಯ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು, ಸಹಕಾರ ಸಂಘ-ಸಂಸ್ಥೆಗಳ ಸಿಬ್ಬಂದಿಗಳು ಅರ್ಜಿ ಸಲ್ಲಿಸಬಹುದು. ಸಹಕಾರ ಸಂಘಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಕಡ್ಡಾಯವಾಗಿ ತರಬೇತಿ ಪಡೆಯಬೇಕಾಗಿದ್ದು, ತರಬೇತಿ ಪಡೆದವರಿಗೆ ಸಹಕಾರ ಕ್ಷೇತ್ರದ ಎಲ್ಲ ಉದ್ಯೋಗ ನೇಮಕಾತಿಯಲ್ಲಿ ಆಧ್ಯತೆ ನೀಡಲಾಗುತ್ತದೆ. ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇದು ಅನುಕೂಲವಾಗುತ್ತದೆ. ಜುಲೈ 1 ರಿಂದ ತರಬೇತಿ ಆರಂಭವಾಗಲಿದ್ದು, ತರಬೇತಿ ಅವಧಿಯಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ ಮಾಹೆಯಾನ ರೂ. 400 ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರೂ. 500 ಶಿಷ್ಯವೇತನ ನೀಡಲಾಗುವದು. ಅರ್ಜಿ ಸಲ್ಲಿಸಲು ತಾ. 31 ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿಗೆ 08272-228437, 9902189872, 8762110952, 9535250704 ಅನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಇನ್ ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‍ಮೆಂಟ್‍ನ ಪ್ರಾಂಶುಪಾಲರು ತಿಳಿಸಿದ್ದಾರೆ.
ರಂಗ ಶಿಕ್ಷಣಕ್ಕೆ
ಸರ್ಕಾರದಿಂದ ಮಾನ್ಯತೆ ಪಡೆದಿರುವ ರಂಗಶಿಕ್ಷಣ ಡಿಪ್ಲೋಮಾಕ್ಕೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಶಿಕ್ಷಣದ ಅವಧಿ ಒಂದು ವರ್ಷ. ಕನಿಷ್ಠ ವಿದ್ಯಾರ್ಹತೆ ಎಸ್‍ಎಸ್‍ಎಲ್‍ಸಿಯಾಗಿದ್ದು ಪದವೀಧರರಿಗೆ ಆದ್ಯತೆ. ತರಬೇತಿ ಅವಧಿಯಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ನೀಡಲಾಗುತ್ತದೆ. ಕರ್ನಾಟಕ ಹಾಗೂ ಭಾರತದ ರಂಗ ತಜ್ಞರು ಮತ್ತು ಅತಿಥಿ ಉಪನ್ಯಾಸಕರಿಂದ ತರಗತಿಗಳು ನಡೆಯುತ್ತವೆ. ಒಂದು ವರ್ಷದಲ್ಲಿ ಭಾರತೀಯ ರಂಗಭೂಮಿ, ಕನ್ನಡ ರಂಗಭೂಮಿ ಮತ್ತು ಸಾಹಿತ್ಯ ಪರಂಪರೆ, ಪಾಶ್ಚಾತ್ಯ ರಂಗಭೂಮಿ, ಅಭಿನಯ, ಆಹಾರ್ಯ, ಶಿಕ್ಷಣದಲ್ಲಿ ರಂಗಭೂಮಿ ಕುರಿತಾದ ಸೈಧಾಂತಿಕ ಮತ್ತು ಪ್ರಾಯೋಗಿಕ ತರಗತಿಗಳು ನಡೆಯುತ್ತವೆ. ಕಳರಿ, ಯೋಗ, ಕಥಕ್ಕಳಿ, ಯಕ್ಷಗಾನ, ಕಂಸಾಳೆ, ಹೆಜ್ಜೆಮೇಳ, ವೀರಗಾಸೆ, ಪ್ರಸಾಧನ, ಬೆಳಕಿನ ವಿನ್ಯಾಸ, ರಂಗ ವಿನ್ಯಾಸ, ವಸ್ತ್ರ ವಿನ್ಯಾಸ ಮತ್ತಿತರ ಕಾರ್ಯಾಗಾರ ಜೊತೆಗೆ ಕಾವ್ಯ, ಚಿತ್ರಕಲೆ ಕುರಿತಾದ ಕಮ್ಮಟಗಳು ನಡೆಯುತ್ತವೆ. ಒಂದು ವರ್ಷದಲ್ಲಿ ನಾಲ್ಕರಿಂದ ಐದು ನಾಟಕಗಳ ಅಭ್ಯಾಸ ಹಾಗೂ ಪ್ರದರ್ಶನ ನಡೆಯುತ್ತದೆ.
ಆಸಕ್ತರು ಪ್ರಾಚಾರ್ಯಾರು, ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ, ಸಾಣೇಹಳ್ಳಿ-577515, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಈ ವಿಳಾಸಕ್ಕೆ ಬರೆದು ಪ್ರವೇಶ ಅರ್ಜಿ ತರಿಸಿಕೊಳ್ಳಬಹುದು ಅಥವಾ ರಂಗಶಾಲೆಯ ವೆಬ್‍ಸೈಟ್: ತಿತಿತಿ.ಣheಚಿಣಡಿesಛಿhooಟsಚಿಟಿehಚಿಟಟi.oಡಿg ನಲ್ಲಿ ಪ್ರವೇಶ ಅರ್ಜಿಯನ್ನು ಡೌನ್‍ಲೋಡ್ ಮಾಡಿ ಜೂನ್ 30 ರೊಳಗೆ ಅರ್ಜಿಯನ್ನು ರಂಗಶಾಲೆಗೆ ಸಲ್ಲಿಸುವದು. ಹೆಚ್ಚಿನ ಮಾಹಿತಿಗೆ ದೂ. 08199-243772 ಸಂಪರ್ಕಿಸಬಹುದು.
ಡಿಇಎಲ್‍ಇಡಿ ಕೋರ್ಸ್‍ಗೆ
ಪ್ರಸಕ್ತ ಸಾಲಿನ ಡಿ.ಇ.ಎಲ್.ಇಡಿ ಪ್ರಥಮ ವರ್ಷದ ವ್ಯಾಸಂಗಕ್ಕಾಗಿ ಜಿಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಕೋರ್ಸಿನ ಸೀಟುಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ತಾ. 28 ಕೊನೆಯ ದಿನವಾಗಿದೆ. ನಿಗದಿತ ಶುಲ್ಕ ಬ್ಯಾಂಕ್‍ಗೆ ಪಾವತಿಸಲು ತಾ. 30 ಕೊನೆಯ ದಿನವಾಗಿದೆ. (ಇಲಾಖೆ ವೆಬ್‍ಸೈಟ್ ತಿತಿತಿ.sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ವಿಳಾಸ,) ವೆಬ್‍ಸೈಟ್‍ನಲ್ಲಿ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಅರ್ಜಿ ನಮೂನೆ ಲಭ್ಯವಿರುತ್ತದೆ. ಅಭ್ಯರ್ಥಿಗಳು ಅರ್ಜಿ ನಮೂನೆ ಹಾಗೂ ದಾಖಲೆಗಳೊಂದಿಗೆ ಜಿಲ್ಲಾ ಶಿಕ್ಷಣ ಸಂಸ್ಥೆ, ಕೂಡಿಗೆ, ಸೋಮವಾರಪೇಟೆ ತಾಲೂಕು ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಪಾಂ್ರಶುಪಾಲರು ಡಯಟ್ ಕೂಡಿಗೆ 08276-278287 ನ್ನು ಸಂಪರ್ಕಿಸಬಹುದು.