ವೀರಾಜಪೇಟೆ, ಮೇ 23: ವೀರಾಜಪೇಟೆ ವಿಭಾಗಕ್ಕೆ ಇಂದು ರಾತ್ರಿ 7 ಗಂಟೆಗೆ ಭಾರೀ ಗುಡುಗು ಮಿಂಚು ಸಹಿತ ಮಳೆ ಸುರಿಯಿತು. ರಾತ್ರಿ 9ಗಂಟೆಯವರೆಗೂ ಮುಂದುವರೆದ ಮಳೆಯಿಂದಾಗಿ ರಾತ್ರಿ ಕೆಲವು ಗಂಟೆಗಳ ಕಾಲ ವಿದ್ಯುತ್ ಸಂಪರ್ಕದ ಅಡಚಣೆ ಉಂಟಾಯಿತು. ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ರಾತ್ರಿ 7ಗಂಟೆಗೆ ವಿಜಯೋತ್ಸವ ಹಮ್ಮಿಕೊಂಡಿದ್ದು, ಈ ಮಳೆಯಿಂದ ಅಡಚಣೆಯಾಯಿತು. ಮಳೆಯ ಕಾರಣ ಕಾರ್ಯಕರ್ತರು ಅಲ್ಲಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಹಂಚಿಕೊಂಡರು.