‘ನಿಖಿಲ್ ಎಲ್ಲಿದ್ದೀಯಪ್ಪ’ ಎಂಬ ಡಿ.ಜೆ. ಸಂಗೀತಕ್ಕೆ ನರ್ತಿಸಿದರು.

ಖಾಸಗಿ ಬಸ್ ನಿಲ್ದಾಣದಿಂದ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಕಕ್ಕೆಹೊಳೆ ಜಂಕ್ಷನ್ ಹಾಗೂ ವಿವೇಕಾನಂದ ವೃತ್ತದಲ್ಲಿ ಪಟಾಕಿ ಸಿಡಿಸಿ ಬಿಜೆಪಿ ಪರ ಘೋಷಣೆ ಕೂಗಿದರು. ನಂತರ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಿದರು.

ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸದಸ್ಯ ಧರ್ಮಪ್ಪ, ಸಬಿತ ಚನ್ನಕೇಶವ, ಪ.ಪಂ. ಸದಸ್ಯ ಶುಭಕರ್, ಪ್ರಮುಖರಾದ ಲೀಲಾ ನಿರ್ವಾಣಿ, ಶಂಭು, ಪಿ. ಮಧು, ಸುಧಾಕರ್, ಶ್ರೀಕಾಂತ್, ಕಲ್ಕಂದೂರು ಪ್ರಕಾಶ್ ಸೇರಿದಂತೆ ನೂರಾರು ಮಂದಿ ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು.ನಿಟ್ಟೂರು-ಕಾರ್ಮಾಡು: ನಿಟ್ಟೂರು ಕಾರ್ಮಾಡು ಗ್ರಾಮದಲ್ಲಿ ನರೇಂದ್ರ ಮೋದಿ ಗೆಲವಿನ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು, ಹಿಂದೂಪರ ಸಂಘಟನೆಯವರು ವಿಜಯೋತ್ಸವ ಆಚರಿಸಿದರು.ಸಿದ್ದಾಪುರ: ನೆಲ್ಯಹುದಿಕೇರಿ ಪಟ್ಟಣದಲ್ಲಿ ಬಿ.ಜೆ.ಪಿ ಹಾಗೂ ಟೀಂ ಮೋದಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭ ಸ್ಥಾನೀಯ ಸಮಿತಿ ಅಧ್ಯಕ್ಷ ಶಾಜಿ, ಪ್ರಮುಖರಾದ ಪದ್ಮನಾಭ, ಜಯ, ಬಿಜು ಸೇರಿದಂತೆ ಇನ್ನಿತರರು ಇದ್ದರು.