ಮಡಿಕೇರಿ, ಮೇ 23: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿಶೇಷಚೇತನರ ವಿಶಿಷ್ಟ ಗುರುತಿನ ಕಾರ್ಡ್‍ಗಳನ್ನು ವಿಶೇಷಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರ ಪ್ರಕಾರ ಕಡ್ಡಾಯವಾಗಿ 21 ಬಗೆಯ ಅಂಗವೈಕಲ್ಯವುಳ್ಳ ವಿಶೇಷಚೇತನರು ಪಡೆಯಬೇಕಾಗಿದೆ. ಇದಕ್ಕಾಗಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾ ವಿಶೇಷಚೇತನರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ವಿಶೇಷಚೇತನರು ತಿತಿತಿ.sತಿಚಿvಟಚಿmbಚಿಟಿಛಿಚಿಡಿಜ. gov.iಟಿ ಲಿಂಕ್ ಕ್ಲಿಕ್ ಮಾಡಿ ಆನ್‍ಲೈನ್ ಮೂಲಕ ವಿಶಿಷ್ಟ ಗುರುತಿನ ಚೀಟಿಗೆ ನೋಂದಣಿ ಮಾಡಿಕೊಳ್ಳಬೇಕು. ಈಗಾಗಲೇ ಅಂಗವೈಕಲ್ಯ ಪ್ರಮಾಣಪತ್ರ ಹೊಂದಿರುವವರು, ಹೊಂದಿಲ್ಲದೇ ಇರುವವರು ತಾವು ಪಡೆದಿರುವ ಮರು ಅಂಗವೈಕಲ್ಯತೆಯ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದು, ತಿರಸ್ಕøತವಾಗಿ ಮರು ಅರ್ಜಿ ಸಲ್ಲಿಸುವವರು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು.
ನೋಂದಣಿ ಮಾಡಿಸಿದ ನಂತರ ಎಲ್ಲಾ ವಿಶೇಷಚೇತನರಿಗೆ ಸಂಬಂಧಿಸಿದ ವೈದ್ಯಕೀಯ ಪ್ರಾಧಿಕಾರಗಳಿಂದ ದೃಡೀಕರಿಸಲಾದ ವೈದ್ಯಕೀಯ ಪ್ರಮಾಣ ಪತ್ರದ ಸಮಗ್ರ ಮಾಹಿತಿಯುಳ್ಳ ಗಣಕೀಕೃತ ವಿಶಿಷ್ಟ ಗುರುತಿನ ಚೀಟಿಯನ್ನು ನೋಂದಾಯಿತ ಅಂಚೆ ಮೂಲಕ ಅವರ ವಿಳಾಸಗಳಿಗೆ ನೇರವಾಗಿ ಕಳುಹಿಸಲಾಗುತ್ತದೆ.
ಯುಡಿಐಡಿ ಕಾರ್ಡ್ ಪಡೆಯಲು ಸ್ಕ್ಯಾನ್ ಮಾಡಲಾದ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ 15 ರಿಂದ 30 ಕೆ.ಬಿ ಇರಬೇಕು. ಸ್ಕ್ಯಾನ್ ಮಾಡಲಾದ ಸಹಿ, ಹೆಬ್ಬೆರೆಳ ಗುರುತಿನ ಪ್ರತಿ 15 ರಿಂದ 30 ಕೆ.ಬಿ ಇರಬೇಕು. ಸ್ಕ್ಯಾನ್ ಮಾಡಲಾದ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಪಾಸ್‍ಪೋರ್ಟ್, ಪಡಿತರ ಚೀಟಿ, ಚುನಾವಣಾ ಮತದಾರರ ಗುರುತಿನ ಚೀಟಿ ಹಾಗೂ ಇತರೆ ಡೋಮಿಸಿಲ್ ಪ್ರಮಾಣ ಪತ್ರ 15 ರಿಂದ 30 ಕೆ.ಬಿ ಇರಬೇಕು. ಅಂಗವೈಕ್ಯಲ್ಯ ಹೊಂದಿರುವ ವಿಶೇಷಚೇತನರು ಅಂಗವೈಕಲ್ಯ ಪ್ರಮಾಣ ಪತ್ರವನ್ನು ಸ್ಕ್ಯಾನ್ ಮಾಡಿ ಅಪ್‍ಲೋಡ್ ಮಾಡಬೇಕು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರು ತಿಳಿಸಿದ್ದಾರೆ.