ಕುಶಾಲನಗರ, ಮೇ 22: ಕುಶಾಲನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ವ್ಯಾಪಾರೋದ್ಯಮದ ಪರವಾನಗಿ ಶುಲ್ಕ ಹೆಚ್ಚಿಸಿರುವ ಬಗ್ಗೆ ಸ್ಥಳೀಯ ಚೇಂಬರ್ ಆಫ್ ಕಾಮರ್ಸ್ ಅಸಮಾಧಾನ ವ್ಯಕ್ತಪಡಿಸಿದೆ. ಈ ಸಂಬಂಧ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಅಮೃತ್‍ರಾಜ್ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳಿಗೆ ಪತ್ರ ಬರೆದು 3 ವರ್ಷಗಳಿಗೊಮ್ಮೆ ಪರಿಷ್ಕರಣೆಯಾಗಬೇಕಾದ ಶುಲ್ಕವನ್ನು ದಿಢೀರ್ ಏರಿಕೆ ಮಾಡಿರುವದನ್ನು ಖಂಡಿಸಿದ್ದಾರೆ. ಪಟ್ಟಣ ಪಂಚಾಯ್ತಿಯ ಈ ಅವೈಜ್ಞಾನಿಕ ಪರಿಷ್ಕøತ ದರವನ್ನು ಕೈಬಿಟ್ಟು ಎರಡು ವರ್ಷಗಳ ನಂತರ ನ್ಯಾಯಸಮ್ಮತವಾದ ಶುಲ್ಕ ಪ್ರಕಟಣೆಗೆ ಆಗ್ರಹಿಸಿದೆ. ತಪ್ಪಿದಲ್ಲಿ ಉದ್ಯಮಿಗಳು ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದ್ದಾರೆ.