ಕೂಡಿಗೆ, ಮೇ 22 : ಕೂಡಿಗೆ-ಕೊಪ್ಪಲು, ಹಗ್ಡಳ್ಳಿ, ಕೋಟೆ ಗ್ರಾಮಗಳ ಶ್ರೀ ದಂಡಿನಮ್ಮ ಮತ್ತು ಶ್ರೀ ಬಸವೇಶ್ವರ ಹಾಗೂ ಶ್ರೀ ಮುತ್ತತ್‍ರಾಯ ಗ್ರಾಮಗಳ ಸೇವಾ ಸಮಿತಿಯ ವತಿಯಿಂದ ಗ್ರಾಮ ದೇವತೆಯ ಹಬ್ಬ ಮತ್ತು ಜಾತ್ರೋತ್ಸವ ಕಾರ್ಯಕ್ರಮ ತಾ. 24 ರಂದು ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ 24ರಂದು ಗ್ರಾಮ ದೇವತೆ ಶ್ರೀ ದಂಡಿನಮ್ಮ ತಾಯಿ ಅವರ 27ನೇ ವರ್ಷದ ವಾರ್ಷಿಕ ಪೂಜೆ ನಡೆಯಲಿದೆ. ಇದರ ಅಂಗವಾಗಿ ಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ದುರ್ಗಿ ಹೋಮ, ದೇವಿಗೆ ಅಭಿಷೇಕ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ, ನಂತರ ಸಂಜೆ ಹಣ್ಣಾಡಗೆ ಉತ್ಸವ, ಕೊಂಡೋತ್ಸವ ಮತ್ತು ಮಧ್ಯರಾತ್ರಿ ಉಯ್ಯಾಲೆ ಮಹೋತ್ಸವ ನಡೆಯಿದೆ. ಮರು ದಿನ ಜಾತ್ರೋತ್ಸವ ನಡೆಯುವದು 25ರಂದು ಶ್ರೀ ಮುತ್ತತ್ ರಾಯ ದೇವರ ಹರಿಸೇವೆ ಉತ್ಸವ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಕೆ.ಕೆ. ಸೋಮಶೇಖರ್, ಕಾರ್ಯದರ್ಶಿ ಕೆ.ಎಸ್. ಚಂದ್ರಶೇಖರ ತಿಳಿಸಿದ್ದಾರೆ.