ಮಡಿಕೇರಿ, ಮೇ 22 : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮತ ಎಣಿಕೆಯ ಫಲಿತಾಂಶದ ಬಗ್ಗೆ ತಾ. 23 ರಂದು (ಇಂದು) ಮಡಿಕೇರಿ ಆಕಾಶವಾಣಿಯಿಂದ ಆಗಾಗ್ಗೆ ಬಿತ್ತರಿಸಲಾಗುವದು. ಮೈಸೂರು, ಕೊಡಗು ಜಿಲ್ಲೆಗಳ ರವಾನಿಸುವ ವರದಿಯನ್ನು ಪ್ರಸಾರಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ನಿರ್ವಾಹಕರಾದ ಟಿ.ಕೆ. ಉನ್ನಿಕೃಷ್ಣನ್ ಮತ್ತು ಡಾ. ವಿಜಯ್ ಅಂಗಡಿ ಅವರು ತಿಳಿಸಿದ್ದಾರೆ.