ವೀರಾಜಪೇಟೆ, ಮೇ 21: ವೀರಾಜಪೇಟೆ ಬಳಿಯ ಆರ್ಜಿ ಗ್ರಾಮದ ರೆಸಾರ್ಟ್‍ವೊಂದರಲ್ಲಿ ವೇಶ್ಯವಾಟಿಕೆ ನಡೆಯುತ್ತಿದ್ದ ಆರೋಪದ ಮೇರೆ ಇಲ್ಲಿನ ನಗರ ಪೊಲೀಸರು ರೆಸಾರ್ಟ್‍ನ ಮಾಲೀಕ ಕೆ.ಸಂತೋಷ್, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಕೇರಳದ ಕೆ.ಪಿ.ಸುರೇಶ್ (42), ಎಂ.ಶಾಜಿ (32) ಎಂಬ ಮೂವರನ್ನು ಬಂಧಿಸಿ ಇಲ್ಲಿನ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.

ರೆಸಾರ್ಟ್‍ನಲ್ಲಿದ್ದ ತಾಲೂಕಿನ ಇಬ್ಬರು ಮಹಿಳೆಯರನ್ನು ಪೊಲೀಸರು ರಕ್ಷಿಸಿ ಮನೆಗೆ ಕಳುಹಿಸಿದ್ದಾರೆ.

ಆರ್ಜಿ ಗ್ರಾಮಸ್ಥರು ನೀಡಿದ ಸುಳಿವಿನ ಮೇರೆ ವೀರಾಜಪೇಟೆ ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ ಮಾರ್ಗದರ್ಶನದ ಮೇರೆ ನಗರ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಸಂತೋಷ್ ಕಶ್ಯಪ್, ಪೊಲೀಸ್ ಸಿಬ್ಬಂದಿಗಳಾದ ಮುನೀರ್, ಸುನಿಲ್, ಗಿರೀಶ್ ಹಾಗೂ ಮಹಿಳಾ ಪೊಲೀಸ್ ಪೂರ್ಣಿಮಾ ದಾಳಿ ನಡೆಸಿದರು. ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.