ಮಡಿಕೇರಿ, ಮೇ 21: ವೀರಾಜಪೇಟೆ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ 2019-20ನೇ ಸಾಲಿಗೆ ದಾಖಲಾಗಲು ಆಸಕ್ತ ಮತ್ತು ಅರ್ಹ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಥಿ ನಿಲಯಗಳ ವಿವರ: ಪೊನ್ನಂಪೇಟೆ, ವೀರಾಜಪೇಟೆ, ಕಾಕೋಟುಪರಂಬು ಮತ್ತು ಬಾಳಲೆ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗಳು ಹಾಗೂ ಪೊನ್ನಂಪೇಟೆ, ವೀರಾಜಪೇಟೆ ಮತ್ತು ಪಾಲಿಬೆಟ್ಟ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ 5ನೇ ತರಗತಿಯಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿ ನಿಲಯಗಳಲ್ಲಿ ವಸತಿ, ಊಟ, ತಿಂಡಿ, ಪುಸ್ತಕ, ಸಮವಸ್ತ್ರ ಹಾಗೂ ಇತರೆ ನಿಲಯಗಳಲ್ಲಿ ಲಭ್ಯವಾಗುವ ಮೂಲಭೂತ ಸೌಲಭ್ಯಗಳು ಸಂಪೂರ್ಣ ಉಚಿತವಾಗಿರುತ್ತದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಕೂಡ ನಿಲಯಗಳಿಗೆ ಪ್ರವೇಶ ಪಡೆಯಲು ನಿಯಮಾನುಸಾರ ಅರ್ಹರಾಗಿರುತ್ತಾರೆ. ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ವೆಬ್‍ಸೈಟ್ ತಿತಿತಿ.sತಿ.ಞಚಿಡಿ.ಟಿiಛಿ.iಟಿ ಪೆÇೀರ್ಟಲ್ ಮೂಲಕ ಜೂನ್ 15 ರೊಳಗೆ ಸಲ್ಲಿಸಿ ನಂತರ ಆನ್‍ಲೈನ್ ಪ್ರತಿಯೊಂದಿಗೆ ಆಧಾರ್ ಕಾರ್ಡ್, ಜಾತಿ, ಆದಾಯ ಪ್ರಮಾಣ ಪತ್ರ ಹಾಗೂ ಮಾಕ್ರ್ಸ್ ಕಾರ್ಡ್‍ನ ಜೆರಾಕ್ಸ್ ಪ್ರತಿಗಳನ್ನು ಸಂಬಂಧಿಸಿದ ನಿಲಯಗಳ ವಾರ್ಡನ್‍ರವರಿಗೆ ಸಲ್ಲಿಸುವಂತೆ ವೀರಾಜಪೇಟೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಶಿಕÀ್ಷಕ ತರಬೇತಿಗೆ

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್.ಎ.ಎಲ್), ಬೆಂಗಳೂರು ಇವರು ನಡೆಸುತ್ತಿರುವ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2019-20ನೇ ಸಾಲಿನಲ್ಲಿ ಸಿ.ಎನ್.ಸಿ. ಫ್ರೋಗ್ರಾಮರ್ ಹಾಗೂ ಆಪರೇಟರ್ ವೃತ್ತಿಯಲ್ಲಿ ಪೂರ್ಣಾವಧಿ ಶಿಕÀ್ಷಕ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು 2019ರ ಜೂನ್ 10 ರೊಳಗೆ ಟೆಕ್ನಿಕಲ್ ಟ್ರೈನಿಂಗ್ ಇನ್ಸ್‍ಟ್ಯೂಟ್, ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. ವಿಮಾನಪುರ ಪೋಸ್ಟ್, ಬೆಂಗಳೂರು-560017 ಇಲ್ಲಿಗೆ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ತೇರ್ಗಡೆ. ಅರ್ಹತಾ ಪರೀಕ್ಷೆಯಲ್ಲಿ ಸಾಮಾನ್ಯ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಕನಿಷ್ಟ ಶೇ.60 ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವಿಕಲಚೇತನ ಅಭ್ಯರ್ಥಿಗಳು ಕನಿಷ್ಟ ಶೇ.50 ಅಂಕಗಳನ್ನು ಪಡೆದಿರಬೇಕು. 2019ರ ಜೂನ್ 1ಕ್ಕೆ ಅನ್ವಯವಾಗುವಂತೆ ಕನಿಷ್ಟ 15 ಹಾಗೂ ಗರಿಷ್ಠ 18 ವರ್ಷಗಳು. ಅಭ್ಯರ್ಥಿಗಳು ಆರ್ಥಿಕವಾಗಿ ಹಿಂದುಳಿದವರಾಗಿರಬೇಕು ಹಾಗೂ ಬಿ.ಪಿ.ಎಲ್. ಅಥವಾ ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರಬೇಕು. ತರಬೇತಿ ಅವಧಿಯು ಮೂರು ವರ್ಷಗಳಾಗಿದ್ದು, ತರಬೇತಿಯನ್ನು ಉಚಿತವಾಗಿ ನೀಡಲಾಗುವದು. ತರಬೇತಿಯ ಅವಧಿಯಲ್ಲಿ ಶಿಷ್ಯ ವೇತನವನ್ನು ನೀಡಲಾಗುವದು. ಅಭ್ಯರ್ಥಿಗಳನ್ನು ಅರ್ಹತಾ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವದು. ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಯನ್ನು ತಿತಿತಿ.hಚಿಟ-iಟಿಜiಚಿ.ಛಿom ರಿಂದ ಪಡೆಯಬಹುದಾಗಿದೆ ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ, ಇಲ್ಲಿಂದ ಪಡೆಯಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

ಪ್ರತಿಭಾ ಪುರಸ್ಕಾರಕ್ಕಾಗಿ

ಕೊಡವ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿ (ಕೆ.ಎಂ.ಇ.ಎಫ್.)ಯ ಸಹಯೋಗದಲ್ಲಿ 2018-19ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ, (ರಾಜ್ಯ ಸಿಲಬಸ್, ಸಿ.ಬಿ.ಎಸ್.ಸಿ ಮತ್ತು ಐ.ಸಿ.ಎಸ್.ಇ) ದ್ವಿತೀಯ ಪಿ.ಯು.ಸಿ. ಹಾಗೂ ಮದರಸ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ತೇರ್ಗಡೆ ಹೊಂದಿರುವ ಕೊಡವ ಮುಸ್ಲಿಂ ಜನಾಂಗದ ಅರ್ಹ ವಿದ್ಯಾರ್ಥಿಗಳಿಂದ ‘ಕೆ.ಎಂ.ಎ. ಪ್ರತಿಭಾ ಪುರಸ್ಕಾರ-2019’ಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ. 75ಕ್ಕಿಂತ ಮೇಲ್ಪಟ್ಟು ಅಂಕ ಪಡೆದ ಅರ್ಹ ಮಕ್ಕಳು ತಮ್ಮ ಶಾಲಾ ಮುಖ್ಯೋಪಾಧ್ಯಾಯರಿಂದ, ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕೃತಗೊಂಡ ಅಂಕಪಟ್ಟಿಯ ಪ್ರತಿ, ಪಾಸ್‍ಪೋರ್ಟ್ ಅಳತೆಯ 3 ಇತ್ತೀಚಿನ ಭಾವಚಿತ್ರ ಸಹಿತ ತಮ್ಮ ಮನೆತನ, ಪೋಷಕರ ವಿವರ, ದೂರವಾಣಿ ಸಂಖ್ಯೆ ಹಾಗೂ ಪೂರ್ಣ ವಿಳಾಸದೊಂದಿಗೆ ತಾ. 31 ರೊಳಗಾಗಿ ‘ಅಧ್ಯಕ್ಷರು, ಕೊಡವ ಮುಸ್ಲಿಂ ಅಸೋಸಿಯೇಷನ್ ಡಿ.ಹೆಚ್.ಎಸ್. ಕಟ್ಟಡ, ಮುಖ್ಯ ರಸ್ತೆ, ವೀರಾಜಪೇಟೆ, ಕೊಡಗು ಜಿಲ್ಲೆ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಸಕ್ತ ಸಾಲಿನ ಮದರಸ ವಿದ್ಯಾಭ್ಯಾಸದ 5ನೇ, 7ನೇ, 10ನೇ ಹಾಗೂ 12ನೇ ತರಗತಿಯ ಪಬ್ಲಿಕ್ ಪರೀಕ್ಷೆಯ ಪಲಿತಾಂಶ ಪ್ರಕಟಗೊಂಡ ನಂತರ, ಅತೀ ಹೆಚ್ಚು ಅಂಕ ಪಡೆದು ತೇರ್ಗಡೆ ಹೊಂದುವ ವಿದ್ಯಾರ್ಥಿಗಳು ತಮ್ಮ ಮದರಸ ಅಧ್ಯಾಪಕರಿಂದ ದೃಢೀಕೃತಗೊಂಡ ಅಂಕಪಟ್ಟಿಯ ಪ್ರತಿ, ಪಾಸ್‍ಪೋರ್ಟ್ ಅಳತೆಯ 3 ಇತ್ತೀಚಿನ ಭಾವಚಿತ್ರ ಸಹಿತ ತಮ್ಮ ಮನೆತನ, ಪೋಷಕರ ವಿವರ, ದೂರವಾಣಿ ಸಂಖ್ಯೆ ಹಾಗೂ ಪೂರ್ಣ ವಿಳಾಸದೊಂದಿಗೆ ಜೂ. 10 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪಡೆಯಲು ಅವರ ಪೋಷಕರ ಕೆ.ಎಂ.ಎ. ಸದಸ್ಯತ್ವ ಕಡ್ಡಾಯವಾಗಿರುತ್ತದೆ. ನೂತನವಾಗಿ ಸದಸ್ಯತ್ವ ಪಡೆಯಲು ಬಯಸುವವರು ಬುಧವಾರ ಅಥವಾ ಶನಿವಾರದಂದು ವೀರಾಜಪೇಟೆಯ ಕೆ.ಎಂ.ಎ. ಪ್ರಧಾನ ಕಚೇರಿಗೆ ಬಂದು ಸದಸ್ಯತ್ವ ಪಡೆದು ತಮ್ಮ ಮಕ್ಕಳ ಪ್ರತಿಭಾ ಪುರಸ್ಕಾರದ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9886060342 ಅನ್ನು ಸಂಪರ್ಕಿಸಬಹುದೆಂದು ಕೆ.ಎಂ.ಎ. ಪ್ರಕಟಣೆ ತಿಳಿಸಿದೆ

ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ

ನಗರದ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್‍ನಲ್ಲಿ 6 ತಿಂಗಳ ಅವಧಿಯ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಎಸ್.ಎಸ್.ಎಲ್.ಸಿ. ಪಾಸಾಗಿರಬೇಕು. ತರಬೇತಿಯ ಅವಧಿಯಲ್ಲಿ ಪ್ರತಿ ತಿಂಗಳು ರೂ. 400 ಶಿಷ್ಯ ವೇತನ ನೀಡಲಾಗುವದು ಹಾಗೂ ಉಚಿತ ವಸತಿ ಗೃಹದ ಸೌಲಭ್ಯವಿದೆ. ಅರ್ಜಿ ಸಲ್ಲಿಸಲು ತಾ. 31 ಕೊನೆಯ ದಿನವಾಗಿದ್ದು, ಹೆಚ್ಚಿನ ವಿವರಕ್ಕಾಗಿ ದೂ. 08272-228437 ಮತ್ತು 9902189872, 8762110952 ಸಂಪರ್ಕಿಸಬಹುದು.