ಮಡಿಕೇರಿ, ಮೇ 21: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಪ್ರಕೃತ್ತಿ ವಿಕೋಪದಲ್ಲಿ ನೊಂದವರಿಗೆ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.
ವಿವಿಧ ಗ್ರಾಮಗಳಲ್ಲಿ ಆಸ್ತಿ, ಮನೆ ಕಳೆದುಕೊಂಡ ಸುನಿಲ್ ಡಿಸೋಜ, ಸುಶೀಲಾ ಭಾಸ್ಕರ್, ಪ್ರವೀಣ್, ಸಿಂಥಿಯಾ, ಮೇರಿ, ಜಾನಕಿ, ತಿಮ್ಮಯ್ಯ, ಭೋಜಮ್ಮ, ಲೂಯಿಸ್, ಥೋಮಸ್, ಕರ್ಮಿಣ್ಯ, ಓಮಾನ, ಫ್ರಾನ್ಸಿಸ್, ಬೌಥೀಸ್ ಮೆಂಡೋನ್ಜ, ಎ.ಸಿ.ಪೂವಯ್ಯ, ಎ.ಸಿ.ಬೆಳ್ಯಪ್ಪ, ಟಿ.ಟಿ.ಸುಭಾಷ್, ಸಿ.ಎಂ. ಪೂಣಚ್ಚ ಅವರಿಗೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ತಲಾ 10,000 ರೂ. ನೀಡಲಾಯಿತು.
ಕಾಟಕೇರಿ ಗ್ರಾಮದ ಗಿಲ್ಬರ್ಟ್ ಮೆಂಡೋನ್ಜ ಆಗಸ್ಟ್ 2018 ರಲ್ಲಿ ಜಲಪ್ರಳಯದ ಸಂದರ್ಭ ಭೂಮಿ ಯಲ್ಲಿ ಹೂತುಹೋಗಿ ಪ್ರಾಣ ಕಳೆದು ಕೊಂಡಿದ್ದು ಇವರ ವಾರಸುದಾರರಾದ ರೀಟಾ ಮೆಂಡೋನ್ಜರವರಿಗೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ `10,000 ರೂ. ನೀಡಲಾಯಿತು. ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಜಿ.ಆರ್.ರವಿಶಂಕರ್, ಕಾರ್ಯದರ್ಶಿ ಎಂ.ಯು. ಮಹೇಶ್ ಆರ್ಥಿಕ ನೆರವನ್ನು ನೊಂದವರಿಗೆ ನೀಡಿ ಭವಿಷ್ಯದಲ್ಲಿ ಉತ್ತಮ ಜೀವನಕ್ಕಾಗಿ ರೋಟರಿ ಸದಸ್ಯರ ಪರವಾಗಿ ಹಾರೈಸಿದರು.