ಶನಿವಾರಸಂತೆ, ಮೇ 19: ದುಂಡಳ್ಳಿ ಗ್ರಾಮ ಪಂಚಾಯಿತಿಯ 3ನೇ ವಿಭಾಗ ಮಾದ್ರೆ ಗ್ರಾಮದ ಸದಸ್ಯರಾಗಿದ್ದ ಎಂ.ಆರ್. ಸಂದೇಶ್ ನಿಧನದ ಹಿನ್ನೆಲೆ ತೆರವಾಗಿದ್ದ ಒಂದು ಸ್ಥಾನಕ್ಕೆ ತಾ. 29 ರಂದು ಮರು ಚುನಾವಣೆ ನಡೆಯಲಿದೆ. ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ಜೆ.ಡಿ.ಎಸ್. ಬೆಂಬಲಿತ ಎಂ.ಟಿ. ರಂಗರಾಜ್ ಹಾಗೂ ಬಿ.ಜೆ.ಪಿ. ಬೆಂಬಲಿತ ಪೂರ್ಣಚಂದ್ರ, ಡಿ. ನಾರಾಯಣ್ ಅವರಿಗೆ ನಾಮಪತ್ರ ಸಲ್ಲಿಸಿದರು.