ಕುಶಾಲನಗರ, ಮೇ 20: ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್ ಮತ್ತು ಯೋಗ ವತಿಯಿಂದ ಇತ್ತೀಚೆಗೆ ಮೈಸೂರು ಜಿಲ್ಲೆಯ ಸರಗೂರಿನಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಕುಶಾಲನಗರದ ಸಹೋದರಿಯರು ಬ್ಲಾಕ್ ಬೆಲ್ಟ್ ಪಡೆದುಕೊಂಡಿದ್ದಾರೆ. ಮುಳ್ಳುಸೋಗೆಯ ಕುವೆಂಪು ಬಡಾವಣೆ ನಿವಾಸಿ ನಂಜುಂಡಸ್ವಾಮಿ ಶಾಲಿನಿ ದಂಪತಿಗಳ ಪುತ್ರಿಯರಾದ ಕುಶಾಲನಗರ ಕನ್ನಡ ಭಾರತಿ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಕೆ.ಎನ್.ಶರಣ್ಯ, ಕೂಡಿಗೆಯ ಅಂಜೆಲಾ ವಿದ್ಯಾನಿಕೇತನ ಶಾಲಾ ವಿದ್ಯಾರ್ಥಿನಿ ಕೆ.ಎನ್.ನಮಿತ ಸಹೋದರಿಯರು ಬ್ಲಾಕ್ ಬೆಲ್ಟ್ ಪಡೆದುಕೊಂಡಿದ್ದಾರೆ. ಯಡವನಾಡಿನ ಪ್ರಮೋದ್ ತರಬೇತುದಾರರಾಗಿದ್ದಾರೆ.