ಕುಶಾಲನಗರದ, ಮೇ 19: ತೊರೆನೂರು ಗ್ರಾಮದ ಶಕ್ತಿ ದೇವತೆ ಶ್ರಿ ದಂಡಿನೇಶ್ವರಿ ಅಮ್ಮನವರ ತ್ರೈವಾರ್ಷಿಕೋತ್ಸ ಶ್ರದ್ಧಾಭಕ್ತಿಯಿಂದ ನೆರವೇರಿತು. ಪೂಜೋತ್ಸವದ ಪ್ರಯುಕ್ತ ಅಲಂಕೃತ ಮಂಟಪದಲ್ಲಿ ಮೆರವಣಿಗೆಯಲ್ಲಿ ತೆರಳಲಾಯಿತು.
ಬಳಿಕ ಕಾವೇರಿ ನದಿಯ ತಟದಲ್ಲಿ ಪುರೋಹಿತ ಸಂಜೀವಯ್ಯ ನೇತೃತ್ವದಲ್ಲಿ, ಗಣ ಹೋಮ ನೆರವೇರಿಸಲಾಯಿತು. ವಿವಿಧ ಪೂಜಾ ಕಾರ್ಯಗಳು ನೆರವೇರಿದವು. ಹರಿಸೇವೆಯನ್ನು ನೆರವೇರಿಸಲಾಯಿತು. ಊರಿನ ಹಿರಿಯರು ಪ್ರಮುಖರೆಲ್ಲಾ ಸೇರಿ ಮಾರ್ಗದ ಮಧ್ಯೆ ಹರಿಸೇವೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕಲಶ ಹೊತ್ತ ಮಹಿಳೆಯರು, ಮಕ್ಕಳು ಭಕ್ತಿ ಭಾವ ಮೆರೆದರು.