ಮಡಿಕೇರಿ, ಮೇ 20: ಮಡಿಕೇರಿಯ ರೋಟರಿ ಸಂಸ್ಥೆಯಿಂದ ಪ್ರಾಕೃತಿಕ ವಿಕೋಪದಿಂದ ಹಾನಿಗೀಡಾಗಿರುವ ಸಂತ್ರಸ್ತರಿಗೆ ಮತ್ತೆ ಆರ್ಥಿಕ ನೆರವು ವಿತರಿಸಲಾಯಿತು.
ವಿವಿಧೆಡೆಯ 24 ಕುಟುಂಬಗಳಿಗೆ ತಲಾ ರೂ. 10 ಸಾವಿರ ನೀಡಲಾಯಿತು. ಇದುವರೆಗೆ ಒಟ್ಟು 64 ಕುಟುಂಬಗಳಿಗೆ ಸಂಸ್ಥೆಯಿಂದ ಒಟ್ಟು ರೂ. 7.20 ಲಕ್ಷ ನೆರವು ನೀಡಿರುವದಾಗಿ ಅಧ್ಯಕ್ಷ ಮೇಜರ್ ಓ.ಎಸ್. ಚಿಂಗಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ.