ಭಾಗಮಂಡಲ, ಮೇ 19: ಪ್ರವಾಸಿಗರನ್ನು ಕರೆದೊಯುತ್ತಿದ್ದ ಟಿಟಿ ವಾಹನ (ಕೆಎ 01ಜೆಎ 3919)ವೊಂದು ಮಾರುತಿ ಕಾರಿಗೆ (ಕೆಎ 04 ಜೆಡ್ 0856) ಡಿಕ್ಕಿ ಹೊಡೆದಿದ್ದು, ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾದ ಘಟನೆ ಇಲ್ಲಿ ನಡೆದಿದೆ. ತಮಿಳುನಾಡು ಮೂಲದ ಪ್ರವಾಸಿಗರನ್ನು ಮೈಸೂರಿನಿಂದ ತಲಕಾವೇರಿಗೆ ಕರೆದೊಯ್ಯುತ್ತಿದ್ದಾಗ ಭಾಗಮಂಡಲದ ತಾವೂರು ಬಳಿ ಎದುರಿನಿಂದ ಬಂದ ಮಾರುತಿ ಕಾರಿಗೆ ಡಿಕ್ಕಿಯಾಗಿದೆ.
ಪರಿಣಾಮ ಟಿಟಿ ವಾಹನ ರಸ್ತೆಗೆ ಮಗುಚಿಕೊಂಡಿದ್ದು, ಪ್ರವಾಸಿಗರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯಿಂದ ಸುಮಾರು ಅರ್ಧಗಂಟೆಗಳ ಕಾಲ ರಸ್ತೆ ತಡೆ ಉಂಟಾಗಿತ್ತು. ತಲಕಾವೇರಿಗೆ ತೆರಳುವ ಯಾತ್ರಾರ್ಥಿಗಳು ಕೆಲಹೊತ್ತು ತೊಂದರೆ ಅನುಭವಿಸಿದರು. ಟಿಟಿ ವಾಹನ ಮನೋಜ್ ಅರಸ್ ಎಂಬವರಿಗೆ ಸೇರಿದ್ದರೆ; ಮಾರುತಿ ಕಾರು ಗಗನ್ ಎಂಬವರಿಗೆ ಸೇರಿದಾಗಿದೆ. ಭಾಗಮಂಡಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಚಾಲಕ ಸಹಿತ ಮಹಿಳಾ ಪ್ರಯಾಣಿಕರು ಗಾಯಾಳುಗಳು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.