ಸುಂಟಿಕೊಪ್ಪ, ಮೇ 20: ರಾಷ್ಟ್ರೀಯ ಹೆದ್ದಾರಿ ಶಾಂತಗಿರಿ ತೋಟದ ತಿರುವಿನಲ್ಲಿ ಕಾರೊಂದು ಮಗುಚಿಕೊಂಡಿದ್ದು, ಕಾರಿನ ಚಾಲಕ ಸೇರಿದಂತೆ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೈಸೂರಿನಿಂದ ಮಂಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರುತಿ ರಿಟ್ಜ್ (ಕೆಎ-19.ಎಂಸಿ6008) ಆಗಮಿಸುತ್ತಿದ್ದ ಸಂದರ್ಭ ಶಾಂತಗಿರಿ ತೋಟದ ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣಕ್ಕೆ ಬಾರದೆ ಹೆದ್ದಾರಿಯ ಬದಿಯ ದಿಂಬ್ಬವನ್ನು ಏರಿ ಮೋರಿಯ ತಡೆಗೋಡೆ ಮೇಲೆ ಮಗುಚಿಕೊಂಡಿದೆ. ಇದರಿಂದ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿ ಚಾಲಕ ಸೇರಿದಂತೆ ನಾಲ್ವರು ಪ್ರಯಾಣಿಸುತ್ತಿದ್ದು ಅದೃಷ್ಟವಶಾತ್ ಯಾವದೇ ರೀತಿಯ ಪ್ರಾಣಹಾನಿ ಆಗದೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ತೆರಳಿ ಸ್ಥಳ ಮಹಜರು ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.