ವೀರಾಜಪೇಟೆ, ಮೇ 18: ತಾ. 17ರಂದು ಶುಕ್ರವಾರ ಜುಮಾ ನಮಾಜ್‍ನ ನಂತರ ಎಸ್.ಎಸ್.ಎಫ್, ಎಸ್.ವೈ.ಎಸ್. ವತಿಯಿಂದ ರಂಜಾನ್ ಪ್ರಯುಕ್ತ “ರೋಗಿಗಳಿಗೆ ಸ್ನೇಹ ಸ್ಪರ್ಶ’’ ಎಂಬ ಹೆಸರಿನಲ್ಲಿ ಹಣ್ಣು - ಹಂಪಲು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಗುಂಡಿಕೆರೆ ಶಾಖೆಯ ಸಿ.ಪಿ. ಅಹ್ಮದ್ ಮದನಿ, ಅಲಿ ಮುಸ್ಲಿಯಾರ್, ಇಸ್ಮಾಯಿಲ್, ಎಂ.ಹೆಚ್. ಶಾದುಲಿ ಮುಸ್ಲಿಯಾರ್, ಎಂ.ಎಸ್. ಉಮ್ಮರ್ ಆರ್ಮಿ, ಎಂ.ಬಿ. ಮೊಯ್ದು, ಎಂ.ಎಂ. ಇಸ್ಮಾಯಿಲ್, ಎಂ. ಹುಸೈನಾರ್, ಎಂ.ಎಸ್. ಉಮ್ಮರ್, ಖಾದರ್, ಶಫೀಕ್ ಎಂ.ಎ., ಸಮದ್ ಬಹರೈನ್, ಉಮ್ಮರ್ ಹಾಗೂ ಜಿಲ್ಲಾ ಕಾರ್ಯದರ್ಶಿ ಉಬೈದುಲ್ಲಾ, ಉಪಾಧ್ಯಕ್ಷ ಹಿಬತುಲ್ಲಾ ಮುಂತಾದವರು ಭಾಗವಹಿಸಿದ್ದರು.