ಪೆರಾಜೆ, ಮೇ 18: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆ.ಜಿ. ಬೋಪಯ್ಯ ಗೆಲವಿಗಾಗಿ ಪೆರಾಜೆ ಬಿಜೆಪಿ ವತಿಯಿಂದ ಶ್ರೀ ಶಾಸ್ತಾವು ದೇವರಲ್ಲಿ ರಂಗಪೂಜೆ ಹರಕೆಯನ್ನು ಮಾಡಿಕೊಂಡಿದ್ದು, ರಂಗಪೂಜೆ ಕಾರ್ಯಕ್ರಮ ತಾ. 17 ರಂದು ನಡೆಸಲಾಯಿತು. ಈ ಪೂಜಾ ಕಾರ್ಯಕ್ರಮದಲ್ಲಿ ಕೆ.ಜಿ. ಬೋಪಯ್ಯ, ಕುಂತಿ ಬೋಪಯ್ಯ, ನಾಗೇಶ್ ಕುಂದಲ್ಪಾಡಿ, ಮೋನಪ್ಪ ಮಾಸ್ಟರ್ ನಂಜಪ್ಪ ನಿಡ್ಯಮಲೆ, ದೇವಳದ ಆಡಳಿತ ಕಾರ್ಯದರ್ಶಿ ಹೊನ್ನಪ್ಪ ಕೊಳಂಗಾಯ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಗ್ರಾಮದ ಜನಪ್ರತಿನಿಧಿಗಳು, ಕಾರ್ಯಕರ್ತರು, ಹಿತೈಷಿಗಳು ಉಪಸ್ಥಿತರಿದ್ದರು. ದೇವಳದ ಆಡಳಿತ ಮಂಡಳಿ ಪರವಾಗಿ ಬೋಪಯ್ಯ ದಂಪತಿಯನ್ನು ಮೊಕ್ತೇಸರ ವಿಶ್ವನಾಥ ಕುಂಬಳಚೇರಿ ಸನ್ಮಾನಿಸಿದರು.