ವೀರಾಜಪೇಟೆ, ಮೇ 18: ವೀರಾಜಪೇಟೆ ಬಳಿಯ ಐಮಂಗಲ, ಮಗ್ಗುಲ, ವೈಪಡ ಗ್ರಾಮಗಳ ಎರಡು ವರ್ಷಕೊಮ್ಮೆ ನಡೆಯುವ ಭದ್ರಕಾಳಿ ದೇವರ ಉತ್ಸವವು ತಾ. 15 ರಿಂದ ಆರಂಭವಾಗಿದ್ದು, ತಾ. 23 ರವರಗೆ ನಡೆಯಲಿದೆ ಎಂದು ಐಮಂಗಲ ಗ್ರಾಮದ ಭದ್ರಕಾಳಿ ದೇವಾಲಯ ಸಮಿತಿ ಅಧ್ಯಕ್ಷ ಬೊಳ್ಳಚಂಡ ಪ್ರಕಾಶ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಕಾಶ್ ಅವರು ಐಮಂಗಲ, ಮಗ್ಗುಲ ಹಾಗೂ ವೈಪಡ ಸೇರಿದಂತೆ ಮೂರು ಗ್ರಾಮದವರು ಸೇರಿ ನಡೆಸುವ ಉತ್ಸವದ ಪ್ರಯುಕ್ತ ತಾ. 19 ರಂದು ಪಟ್ಟಣಿ, ಮೂರು ಗ್ರಾಮಸ್ಥರು ಸೇರಿ ದೇವರ ಬನಕ್ಕೆ ಹೋಗಿ ದೇವರನ್ನು ಕರೆ ತರುವದು. ರಾತ್ರಿ 10 ಗಂಟೆಗೆ ಆಯಾಯ ಗ್ರಾಮದ ಅಂಬಲದಿಂದ ವೇಷ ಹಾಕಿ ಮನೆ ಮನೆಗೆ ತೆರಳಿ ತಾ. 20 ರಂದು ಅಪರಾಹ್ನ 4 ಗಂಟೆಗೆ ಆಯಾಯ ಗ್ರಾಮದ ಭದ್ರಕಾಳಿ ದೇವಸ್ಥಾನಕ್ಕೆ ವೇಷ ಬರುವದು. ನಂತರ 5 ಗಂಟೆಗೆ ಮಹಾ ಪೂಜಾಸೇವೆ ನಡೆಯಲಿದೆ. ತಾ. 21 ರಂದು ಅಪರಾಹ್ನ 3 ಗಂಟೆಗೆ ಮಗ್ಗುಲ ಗ್ರಾಮದ ಮಾಚ್ಚಟಿ ಪರೆಯಲ್ಲಿ ಮೂರು ಗ್ರಾಮದ ಕುದುರೆ ಹಬ್ಬ ಜರುಗಲಿದೆ. ರಾತ್ರಿ 10 ಗಂಟೆಗೆ ದೇವರ ತೆರೆ, ತಾ. 22 ರಂದು 3 ಗಂಟೆಗೆ ಕುರುಂದ ಹಬ್ಬ ನಡೆಯಲಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಮಗ್ಗುಲ ಗ್ರಾಮದ ದೇವಸ್ಥಾನದ ಚೋಕಂಡ ರಮೇಶ್, ದೇವತಕ್ಕ ಕೊಟ್ಟಿಯಂಡ ಜೀವನ್, ವೈಪಡ ಗ್ರಾಮದ ದೇವಸ್ಥಾನದ ವಾಟೇರಿರ ಶಂಕರಿ ಪೂವಯ್ಯ, ದೇವತಕ್ಕ ಪುಲಿಯಂಡ ಲೋಕೇಶ್ ಹಾಜರಿದ್ದರು.