ಕೂಡಿಗೆ, ಮೇ 17: ಕೂಡಿಗೆಯ ದಂಡಿನಮ್ಮ ಮತ್ತು ಬಸವೇಶ್ವರ ದೇವಾಲಯ ಸಮಿತಿಯ ವತಿಯಿಂದ ಬಸವೇಶ್ವರ ವಾನ್ಯವು ತಾ. 20ರಂದು ನಡೆಯಲ್ಲಿದೆ. ಅಂದು ಬೆಳಗ್ಗೆ ಶ್ರೀ ಬಸವೇಶ್ವರ ದೇವಾಲದಲ್ಲಿ ಬಸವೇಶ್ವರ ದೇವರಿಗೆ ವಿಶೇಷ ಪೂಜೆ ಹೋಮ ಹವನ, ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆದು, ಸಂಜೆ ವಿದ್ಯುತ್ ಅಲಂಕೃತವಾದ ಭವ್ಯ ಮಂಟಪದಲ್ಲಿ ಬಸವನ ವಿಗ್ರಹವನ್ನು ಕುಳ್ಳಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಬಸವೇಶ್ವರ ಉತ್ಸವವನ್ನು ನಡೆಸಲಾಗುವದು ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಕೆ. ಸೋಮಶೇಖರ, ಕಾರ್ಯದರ್ಶಿ ಚಂದ್ರಶೇಖರ್ ತಿಳಿಸಿದ್ದಾರೆ.