ಮಡಿಕೇರಿ, ಮೇ 17: ಹಿಯರಿಂಗ್ ಟಿನಿಟಸ್ ಮತ್ತು ಇಂಪ್ಲಾಂಟ್ ಕ್ಲಿನಿಕ್’ ನಗರದ ದಾಸವಾಳ ರಸ್ತೆಯಲ್ಲಿ ತಾ. 20 ರಂದು ಕಾರ್ಯಾರಂಭ ಮಾಡಲಿದ್ದು, ಅಂದು ಸಾರ್ವಜನಿಕರಿಗೆ ಬೆಳಗ್ಗಿನಿಂದ ಸಂಜೆಯವರೆಗೆ ಉಚಿತ ಶ್ರವಣದೋಷ ಪತ್ತೆ ಶಿಬಿರ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಸ್ಥೆಯ ಆಡಿಯಾಲಜಿಸ್ಟ್ ವಿಜಯಲಕ್ಷ್ಮಿ, ಸಂಸ್ಥೆಯ ಕಾರ್ಯನಿರ್ವಾಹಕರಾದ ಡಾ. ರಾಧಾ ಸಿಂಹಾದ್ರಿ ನೇತೃತ್ವದಲ್ಲಿ ಅತ್ಯುತ್ತಮವಾದ ಸಲಕರಣೆÉ ಗಳೊಂದಿಗೆ ಶ್ರವಣದ ತೊಂದರೆ ಗಳನ್ನು ಪತ್ತೆಹಚ್ಚಿ ಹಿಯರಿಂಗ್ ಏಡ್ ಮತ್ತು ಇಂಪ್ಲಾಂಟ್ ತಂತ್ರಗಾರಿಕೆ ಯಿಂದ ಕಿವಿಯ ತೊಂದರೆಗಳನ್ನು ಶಾಶ್ವತವಾಗಿ ಸರಿಪಡಿಸಲಾಗುವದು ಎಂದು ತಿಳಿಸಿದರು.
ತಾ. 20 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ದಾಸವಾಳ ರಸ್ತೆಯಲ್ಲಿ ಕ್ಲಿನಿಕ್ನ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಪಾಲಿಬೆಟ್ಟ ಚೆಶೈರ್ ಹೋಂನ ಅಧ್ಯಕ್ಷೆ ಗೀತಾ ಚಂಗಪ್ಪ, ಇಎನ್ಟಿ ಸರ್ಜನ್ಗಳಾದ ಡಾ. ಮೋಹನ್ ಅಪ್ಪಾಜಿ, ಡಾ. ಅಫ್ಜಲ್, ಮೂಳೆ ತಜ್ಞ ಡಾ. ಸಿದ್ದೀಕ್, ಮೈಸೂರಿನ ರೋಟರಿ ಸದಸ್ಯ ಶಾಂತಮೂರ್ತಿ, ಸಮಾಜ ಕಲ್ಯಾಣ ಅಧಿಕಾರಿ ಮಮ್ತಾಜ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಆಡಿಯಾಲಜಿಸ್ಟ್ ಕಾರ್ತಿಕ್ ಅವರು ಮಾತನಾಡಿ, ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ 1 ರಿಂದ 8 ವರ್ಷದ ಒಳಗಿನ ಮಕ್ಕಳಿಗೆ ಉತ್ತಮ ಪರಿಣಾಮವನ್ನು ಬೀರುವ ಮೂಲಕ ಅವರ ಶ್ರವಣ ಶಕ್ತಿಯನ್ನು ಮರಳಿಸುವಲ್ಲಿ ಯಶಸ್ತಿಯಾಗುತ್ತದೆ. ಇನ್ನುಳಿದಂತೆ ಅಪಘಾತಗಳಲ್ಲಿ ಶ್ರವಣ ಶಕ್ತಿಯನ್ನು ಕಳೆದುಕೊಂಡವರಿಗೂ ಈ ಚಿಕಿತ್ಸೆ ಪರಿಣಾಮಕಾರಿಯಾಗಲಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಆಡಿಯಾಲಜಿಸ್ಟ್ ತಶ್ಮಿ ಹಾಗೂ ಕ್ಲಿನಿಕ್ ವ್ಯವಸ್ಥಾಪಕ ಗೋಪಿನಾಥ್ ಹಾಜರಿದ್ದರು.