ನಾಪೆÇೀಕ್ಲು, ಮೇ 17: ಅಪ್ಪಂಗಳದಿಂದ ಪನ್ಯಕ್ಕಾಗಿ ಕಾಟಕೇರಿ, ಮಂಗಳೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟಿದ್ದು, ವಾಹನ ಸಂಚಾರ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಿಸಿ ದವರು ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು, ವಾಹನ ಚಾಲಕರು ಆಗ್ರಹಿಸಿದ್ದಾರೆ.
ನಾಪೆÇೀಕ್ಲು, ಭಾಗಮಂಡಲ ಕಡೆಯಿಂದ ಮಂಗಳೂರಿಗೆ ಪ್ರಯಾಣಿ ಸುವ ವಾಹನಗಳಿಗೆ ಇದು ಸಂಪರ್ಕ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಸಂಚರಿಸುವದರಿಂದ ದೂರ, ಸಮಯ ಮತ್ತು ಇಂಧನದ ಉಳಿತಾಯವಾಗುತ್ತದೆ. ಆದರೆ ಈ ರಸ್ತೆ ಸಂಪೂರ್ಣ ಹದಗೆಟ್ಟಿರುವದರಿಂದ ವಾಹನ ಸಂಚಾರ ಸಾಧ್ಯವಿಲ್ಲದಂತಾಗಿದೆ ಎನ್ನುತ್ತಾರೆ ವಾಹನ ಚಾಲಕರು.
ಈ ರಸ್ತೆಗಾಗಿ ಕೆಲವು ಖಾಸಗಿ ಹಾಗೂ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳೂ ಸಂಚರಿಸುತ್ತಿದ್ದು, ರಸ್ತೆ ಹಾಳಾಗಿರುವ ಕಾರಣ ಕೆಲವು ಖಾಸಗಿ ಬಸ್‍ಗಳು ಈ ರಸ್ತೆಗಾಗಿ ಸಂಚರಿಸುತ್ತಿಲ್ಲ. ಈ ರಸ್ತೆ ಹಲವಾರು ವರ್ಷಗಳಿಂದಲೇ ಇದೇ ಪರಿಸ್ಥಿತಿಯಲ್ಲಿದ್ದು, ಇದರ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಆದುದರಿಂದ ಈ ರಸ್ತೆಯನ್ನು ದುರಸ್ತಿಗೊಳಿಸುವದರ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.