ಸೋಮವಾರಪೇಟೆ,ಮೇ 17 : ಸಮೀಪದ ಅಭಿಮಠ ತಲ್ತರೆಶೆಟ್ಟಳ್ಳಿ ಗ್ರಾಮದ ಶ್ರೀ ಚೌಡೇಶ್ವರಿ ದೇವರ ವಾರ್ಷಿಕ ಪೂಜೋತ್ಸವ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಗಳು, ಮಹಾಮಂಗಳಾರತಿ ನಂತರ ಅನ್ನದಾನ ನಡೆಯಿತು.

ಇದೇ ಸಂದರ್ಭ ನೂತನ ಸಾಲಿನ ಆಡಳಿತ ಮಂಡಳಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಹೆಚ್.ಪಿ. ಸುರೇಶ್, ಉಪಾಧ್ಯಕ್ಷರಾಗಿ ಹೆಚ್.ಬಿ. ರಾಜಪ್ಪ, ಕಾರ್ಯದರ್ಶಿಯಾಗಿ ಎ.ಕೆ. ನವೀನ ಸೇರಿದಂತೆ 8 ಮಂದಿ ನಿರ್ದೇಶಕರುಗಳನ್ನು ನೇಮಿಸಲಾಯಿತು.