ಕೂಡಿಗೆ, ಮೇ 16: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕೂಡಿಗೆ ವಲಯದ ಪದಾಧಿಕಾರಿಗಳ ಸಭೆಯನ್ನು ಕೂಡುಮಂಗಳೂರು ಸಮುದಾಯಭವನದಲ್ಲಿ ನಡೆಸಲಾಯಿತು. ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಪದಾಧಿಕಾರಿಗಳ ಜವಾಬ್ದಾರಿಯ ಬಗ್ಗೆ ಮಾಹಿತಿ ನೀಡಿದರು.

ತಾಲೂಕು ಜ್ಞಾನವಿಕಾಸ ಕಾರ್ಯಕ್ರಮದ ಸಮನ್ವಯಾಧಿಕಾರಿ ಪದ್ಮ ಮೈಕ್ರೋಬಚಾತ್ ವಿಮಾ ಪಾಲಿಸಿಯ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಅಧ್ಯಕ್ಷ ನಾಗೇಶ್, ಶಾಂತಿ, ವನಿತಾ, ಶರ್ಮಿಳಾ ಮತ್ತು ಗಿರೀಶ್, ಪದಾಧಿಕಾರಿಗಳು ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.