ಮಡಿಕೇರಿ, ಮೇ 16: ನಗರದ ಗಾಲ್ಫ್ ಮೈದಾನ ಬಳಿ ವಿಶಾಲ ನಿವೇಶನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕೊಡಗು ಜಿಲ್ಲಾ ನ್ಯಾಯಾಲಯ ಕಟ್ಟಡಗಳ ಸಂಕೀರ್ಣಕ್ಕೆ ಅಗತ್ಯ ಪೀಠೋಪಕರಣ ಇತ್ಯಾದಿಯೊಂದಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತಿದೆ. ಪ್ರಾರಂಭದಲ್ಲಿ ರೂ. 29.6 ಕೋಟಿ ವೆಚ್ಚದಲ್ಲಿ ಆರಂಭಗೊಂಡಿದ್ದ ಕಾಮಗಾರಿ ಪ್ರಸಕ್ತ ಸುಮಾರು ರೂ. 36.7 ಕೋಟಿ ತಲಪುವಂತಾಗಿದೆ.ಮೂರು ಅಂತಸ್ತುಗಳೊಂದಿಗೆ ತಲಾ ಮೂರು ನ್ಯಾಯಾಂಗ ಕಲಾಪ ಸಭಾಂಗಣಗಳ ಸಹಿತ ಆಡಳಿತ ಕಚೇರಿ, ನ್ಯಾಯಾಧೀಶರುಗಳ ಕೊಠಡಿ, ವಕೀಲರು ಹಾಗೂ ಸಿಬ್ಬಂದಿಗಳಿಗೆ ಪ್ರತ್ಯೇಕ ಕೊಠಡಿಗಳನ್ನು ಒಳಗೊಂಡಂತೆ ವಿಚಾರಣಾ ಬಂಧಿಗಳಿಗೂ ಆಯಾ ಸಭಾಂಗಣಗಳಿಗೆ ಹೊಂದಿಕೊಂಡು ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ.ಈ ಮಾಸಾಂತ್ಯಕ್ಕೆ ಎಲ್ಲಾ ರೀತಿಯ ಕಾಮಗಾರಿ ಪೂರ್ಣಗೊಳ್ಳುವ ಭರವಸೆಯನ್ನು ಕಟ್ಟಡದ ಗುತ್ತಿಗೆದಾರರು ನೀಡಿದ್ದಾರೆ. ಒಟ್ಟು 9 ನ್ಯಾಯಾಂಗ ಕಲಾಪ ಸಭಾಂಗಣಗಳ ಸಹಿತ ಇತರ ಆಡಳಿತ ಕಚೇರಿಗಳು ಸೂಕ್ತ ಭದ್ರತಾ ವ್ಯವಸ್ಥೆಯಲ್ಲಿ ರೂಪುಗೊಳ್ಳುತ್ತಿದೆ. ಅಲ್ಲದೆ ಜಿಲ್ಲೆಯ ನ್ಯಾಯಾಧೀಶರುಗಳು ಇಲ್ಲಿನ ವ್ಯವಸ್ಥೆಯನ್ನು ಮೈಸೂರು ನ್ಯಾಯಾಲಯದ ಮಾದರಿಯಲ್ಲಿ ರೂಪಿಸಲು ಸಲಹೆ ನೀಡಿದ್ದಾರೆ. ಹೀಗಾಗಿ ಹೆಚ್ಚುವರಿ ರೂ. 2.80 ಕೋಟಿ ವೆಚ್ಚದಲ್ಲಿ ಪ್ರಸಕ್ತ ವಿಸ್ತøತ ಕೆಲಸ ಕೈಗೊಳ್ಳಲು ಕ್ರಿಯಾಯೋಜನೆ ರೂಪಿಸಿ ಸರಕಾರಕ್ಕೆ ಹಣ ಮಂಜೂರಾತಿಗೆ ಸಲ್ಲಿಸಲಾಗಿದೆ.(ಮೊದಲ ಪುಟದಿಂದ) ಆಧುನಿಕ ತಂತ್ರಜ್ಞಾನಗಳೊಂದಿಗೆ ಕಂಪ್ಯೂಟರ್, ಟಿ.ವಿ. ವ್ಯವಸ್ಥೆ, ಸಿ.ಸಿ. ಕ್ಯಾಮರಾಗಳು, ಸಮರ್ಪಕ ವಿದ್ಯುತ್ ಬೆಳಕು ಇತ್ಯಾದಿ ಮೂಲಭೂತ ಸೌಕರ್ಯಕ್ಕೆ ಈ ನ್ಯಾಯಾಲಯ ಕಟ್ಟಡದಲ್ಲಿ ಒತ್ತು ನೀಡಲಾಗುತ್ತಿದೆ. ಅಲ್ಲದೆ, ವಕೀಲರ ಸಂಘಕ್ಕೆ ಪ್ರತ್ಯೇಕ ಸಭಾಂಗಣ, ಉಪಹಾರ ಗೃಹ, ದಾಖಲೆಗಳನ್ನು ಸಂರಕ್ಷಿಸಲು ಪ್ರತ್ಯೇಕ ಭದ್ರತಾ ಕೊಠಡಿಯೊಂದಿಗೆ ಖಜಾನೆ ಕೂಡ ಅಳವಡಿಸಲಾಗುತ್ತಿದೆ. ಆದರೆ ಕಟ್ಟಡಕ್ಕೆ ಬಹುತೇಕ ಕಿಟಕಿ ದ್ವಾರಗಳ ಸಹಿತ ಬಾಗಿಲು ಕೆಲಸ ಕೂಡ ಆಗಬೇಕಿದೆ. ಕೆಲವು ತಾಂತ್ರಿಕ ಕಾರಣ ಗಳಿಂದ ಕಾಮಗಾರಿಯಲ್ಲಿ ವಿಳಂಬದೊಂದಿಗೆ ನೂತನ ಕಟ್ಟಡಕ್ಕೆ ಅಗತ್ಯ ಪೀಠೋಪಕರಣ ಇತ್ಯಾದಿ ಬಗ್ಗೆ, ನ್ಯಾಯಾಧೀಶರುಗಳ ಮಾರ್ಗದರ್ಶನ ದಲ್ಲಿ ಕೆಲಸ ಕಟ್ಟಡದಲ್ಲಿ ಒತ್ತು ನೀಡಲಾಗುತ್ತಿದೆ. ಅಲ್ಲದೆ, ವಕೀಲರ ಸಂಘಕ್ಕೆ ಪ್ರತ್ಯೇಕ ಸಭಾಂಗಣ, ಉಪಹಾರ ಗೃಹ, ದಾಖಲೆಗಳನ್ನು ಸಂರಕ್ಷಿಸಲು ಪ್ರತ್ಯೇಕ ಭದ್ರತಾ ಕೊಠಡಿಯೊಂದಿಗೆ ಖಜಾನೆ ಕೂಡ ಅಳವಡಿಸಲಾಗುತ್ತಿದೆ. ಆದರೆ ಕಟ್ಟಡಕ್ಕೆ ಬಹುತೇಕ ಕಿಟಕಿ ದ್ವಾರಗಳ ಸಹಿತ ಬಾಗಿಲು ಕೆಲಸ ಕೂಡ ಆಗಬೇಕಿದೆ. ಕೆಲವು ತಾಂತ್ರಿಕ ಕಾರಣ ಗಳಿಂದ ಕಾಮಗಾರಿಯಲ್ಲಿ ವಿಳಂಬದೊಂದಿಗೆ ನೂತನ ಕಟ್ಟಡಕ್ಕೆ ಅಗತ್ಯ ಪೀಠೋಪಕರಣ ಇತ್ಯಾದಿ ಬಗ್ಗೆ, ನ್ಯಾಯಾಧೀಶರುಗಳ ಮಾರ್ಗದರ್ಶನ ದಲ್ಲಿ ಕೆಲಸ ವಿಭಾಗದ ಮುಖ್ಯಸ್ಥರು ಪರಿಶೀಲನೆ ಬಳಿಕವಷ್ಟೇ ಅಂತಿಮ ನಿರ್ಧಾರ ಹೊರಬೀಳುವ ಇಂಗಿತ ವ್ಯಕ್ತಪಡಿಸಿ ದ್ದಾರೆ. ಬಹುಶಃ ಮಳೆಗಾಲದ ಬಳಿಕ ಮುಂದಿನ ಅಕ್ಟೋಬರ್ನಲ್ಲಿ ನೂತನ ನ್ಯಾಯಾಲಯದ ಉದ್ಘಾಟನೆ ಯೊಂದಿಗೆ, ಹಳೆಯ ಕಟ್ಟಡದಿಂದ ಸ್ಥಳಾಂತರ ಸಾಧ್ಯವೆಂದುಅಭಿಪ್ರಾಯಪಟ್ಟಿದ್ದಾರೆ.