ಮಡಿಕೇರಿ, ಮೇ 17: ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡು ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಗೌಡ ಜನಾಂಗದ ನಡುವೆ ನಡೆಯುತ್ತಿರುವ ಗೌಡ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಪೊಕ್ಕುಳಂಡ್ರ ತಂಡ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದೆ. ಕಟ್ಟೆಮನೆ, ತೆಕ್ಕಡೆ, ಕೋಟೇರ, ಕಡ್ಯದ, ಕುಯ್ಯಮುಡಿ ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿವೆ.

ಇಂದು ನಡೆದ ಪಂದ್ಯಾಟದಲ್ಲಿ ಮುಕ್ಕಾಟಿ ಬಿ ತಂಡ ಬೊಳ್ತಜ್ಜಿರ ತಂಡವನ್ನು 2-0 ಗೋಲಿನಿಂದ ಸೋಲಿಸಿತು. ಯಶವಂತ್ ಹಾಗೂ ಕಿರಣ್ ಗೋಲು ಬಾರಿಸಿದರು. ಪೊನ್ನಚನ ಬಿ ತಂಡ ದಾಯನ ತಂಡವನ್ನು 3-1 ಗೋಲುಗಳಿಂದ ಮಣಿಸಿತು. ಲಿಖಿತ್, ಪೂವಣ್ಣ ಹಾಗೂ ಮಂಜು ಗೋಲು ಬಾರಿಸಿದರೆ, ದಾಯನ ಜೀವಿತ್ ತಂಡ ಪರ ಗೋಲು ದಾಖಲಿಸಿದರು. ಕುಯ್ಯಮುಡಿ ತಂಡ ಇಟ್ಟಣಿಕೆ ತಂಡವನ್ನು 2-0 ಗೋಲಿನಿಂದ ಸೋಲಿಸಿತು. ಜಗ್ಗು, ನಿಶ್ ಗೋಲು ಬಾರಿಸಿದರು. ಕಡ್ಯದ ತಂಡ ಮುಕ್ಕಾಟಿ ಬಿ ತಂಡವನ್ನು 3-0 ಗೋಲುಗಳಿಂದ ಮಣಿಸಿತು. ದರ್ಶನ್, ಪ್ರವೀಣ್, ಕಾರ್ತಿಕ್ ಗೋಲು ದಾಖಲಿಸಿದರು. ಮತ್ತೊಂದು ಪಂದ್ಯದಲ್ಲಿ ಕಡ್ಯದ ತಂಡ ಪೊನ್ನಚನ ಬಿ ತಂಡವನ್ನು 3-1 ಗೋಲುಗಳಿಂದ ಸೋಲಿಸಿತು. ಪ್ರವೀಣ್, ನೀತು, ಹೃಷಿ ತಲಾ ಒಂದೊಂದು ಗೋಲು ಗಳಿಸಿದರು. ಪೊನ್ನಚನ ಲಿಖಿನ್ ತಂಡದ ಪರ ಗೋಲು ಗಳಿಸಿದರು.

ತೆಕ್ಕಡೆ ತಂಡ ಕಾಳೇರಮ್ಮನ ತಂಡವನ್ನು 2-1 ಗೋಲುಗಳಿಂದ ಸೋಲಿಸಿತು. ಲೋಹಿತ್ ಹಾಗೂ ಬುವಿತ್ ಗೋಲು ಗಳಿಸಿದರೆ, ಕಾಳೇರಮ್ಮನ ಅಶ್ವಥ್ ತಂಡದ ಪರ ಗೋಲು ದಾಖಲಿಸಿದರು. ಪೊಕ್ಕುಳಂಡ್ರ ಹಾಗೂ ಬಡುವಂಡ್ರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಪೂರ್ಣಾವಧಿಯಲ್ಲಿ ಯಾವದೇ ಗೋಲು ಆಗದ ಹಿನ್ನೆಲೆಯಲ್ಲಿ ಟೈಬ್ರೇಕರ್‍ನಲ್ಲಿ ಪೊಕ್ಕುಳಂಡ್ರ 4-3 ಗೋಲುಗಳ ಅಂತರದಿಂದ ಗೆಲವು ಸಾಧಿಸಿತು.

ಕೋಟೇರ ತಂಡ ಮಾವಾಜಿ ತಂಡವನ್ನು 3-0 ಗೋಲುಗಳಿಂದ ಸೋಲಿಸಿತು. ಭುವನ್, ಹರೀಶ್, 2 ಗೋಲು ಗಳಿಸಿದರು. ಕಟ್ಟೆಮನೆ ತಂಡ ಕೋಳಿಬೈಲು ತಂಡವನ್ನು 1-0 ಗೋಲಿನಿಂದ ಪರಾಭವಗೊಳಿಸಿತು. ರಾಕೆÉೀಶ್ ಗೋಲು ದಾಖಲಿಸಿದರು. ತೆಕ್ಕಡೆ ತಂಡ ಕೂಡಕಂಡಿ ತಂಡವನ್ನು 2-0 ಗೋಲುಗಳಿಂದ ಸೋಲಿಸಿತು.