ಮಡಿಕೇರಿ, ಮೇ 17: ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ವತಿಯಿಂದ ತಾ. 18 ಮತ್ತು 19 ರಂದು ನಡೆಯಬೇಕಾಗಿದ್ದ 8ನೇ ವರ್ಷದ ಕೊಡಗು ಜಿಲ್ಲಾಮಟ್ಟದ ‘ರೋಮನ್ ಕ್ಯಾಥೋಲಿಕ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ-2019’ನ್ನು ಜೂ. 1 ಮತ್ತು 2ಕ್ಕೆ ಮುಂದೂಡಲಾಗಿದೆ.
ಕುಶಾಲನಗರದ ಮಿಸ್ಟ್ ಪ್ಲವರ್ ರೆಸಿಡೆನ್ಸಿ ಸಭಾಂಗಣದಲ್ಲಿ ಅಸೋಸಿಯೇಷನ್ನ ಅಧ್ಯಕ್ಷ ಜೋಸೆಫ್ ಸ್ಯಾಂ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯ ತೀರ್ಮಾನದಂತೆ ರೋಮನ್ ಕ್ಯಾಥೋಲಿಕ್ ಕ್ರಿಕೆಟ್ ಪಂದ್ಯಾವಳಿಯನ್ನು ಕಾರಣಾಂತರಗಳಿಂದ ಜೂ. 1 ಹಾಗೂ 2ಕ್ಕೆ ಮುಂದೂಡಲಾಯಿತು. ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಪಂದ್ಯಾವಳಿಯನ್ನು ನಡೆಸಲು ನಿರ್ಧರಿಸಲಾಯಿತು.
ಇದರೊಂದಿಗೆ ಜೂ. 2 ರಂದು ಮಹಿಳೆಯರು ಹಾಗೂ ಮಕ್ಕಳಿಗೂ ವಿವಿಧ ಸ್ಪರ್ಧೆಗಳು ನಡೆಯಲಿವೆ. ಅಂದು ಸಂಜೆ 4 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸಹಾಯಾರ್ಥ ಲಕ್ಕಿಡಿಪ್ನ್ನು ಡ್ರಾ ಮಾಡಲಾಗುವದು ಎಂದು ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ ಜಾನ್ಸನ್ ಪಿಂಟೋ ತಿಳಿಸಿದರು.
ಖಜಾಂಚಿ ಐ.ಡಿ. ರಾಯ್, ಸಂಚಾಲಕ ಜೋಕಿಮ್ ರಾಡ್ರಿಗಸ್, ಪ್ರಮುಖರಾದ ವಿನ್ಸಿ ಡಿಸೋಜ, ಎ.ಜಿ. ಯಶೋಧ, ಡೆನ್ನಿ ಬರೋಸ್, ಎಸ್.ಎಂ. ಡಿಸಿಲ್ವ, ಗ್ರೇಸ್ಸಿ ಬಿ.ಎಸ್. ಸಂತಪ್ಪ, ಫಿಲಿಪ್ ವಾಸ್, ಅಂತೋಣಿ ಡಿಸೋಜ, ವಿ.ಎ. ಲಾರೆನ್ಸ್, ರಾಯ್ ಸಬಾಸ್ಟಿನ್, ಕೆ.ಎ. ಪೀಟರ್ ಮತ್ತಿತರ ಪ್ರಮುಖರು ಸಭೆಯಲ್ಲಿ ಹಾಜರಿದ್ದರು.
ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವವರು ಹೆಚ್ಚಿನ ಮಾಹಿತಿಗಾಗಿ 9448000436, 9449767492, 9980060342, 9448278216ನ್ನು ಸಂಪರ್ಕಿಸಬಹುದಾಗಿದೆ.