ಗೋಣಿಕೊಪ್ಪ ವರದಿ, ಮೇ. 17: ಪ್ರತ್ಯೇಕ ರಸ್ತೆ ಅಪಘಾತದಲ್ಲಿ 8 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದ್ದು, ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ಗಾಯಾಳು ಗಳನ್ನು ಮಾನಂದವಾಡಿ ಮತ್ತು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಕೈಕೇರಿ ಮುಖ್ಯರಸ್ತೆಯಲ್ಲಿ ಹೆಗ್ಗಳದ ಲವೀಶ್ ಅವರ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಾಲ್ವರು ಪ್ರಯಾಣಿಕರು ಗಾಯಗೊಂಡರು. ಸೀಗೆತೋಡು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಐಟ್ವೆಂಟಿ ಕಾರು ಸೇತುವೆಯ ಕೆಳಗೆ ಮಗುಚಿಕೊಂಡು ಚೆನ್ನೈ ಮೂಲಕ ಐವರು ಪ್ರಯಾಣಿಕರು ಪವಾಡ ರೀತಿಯಲ್ಲಿ ಪಾರಾಗಿದ್ದಾರೆ.
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು : ಹೆಗ್ಗಳದ ಲವೀಶ್ ಎಂಬವರು ಇರಿಟ್ಟಿಯಿಂದ ಪೊನ್ನಪ್ಪಸಂತೆಗೆ ತೆರಳುತ್ತಿದ್ದ ಸಂದರ್ಭ ಕೈಕೇರಿಯಲ್ಲಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿದೆ. ಚಾಲಕ ಲವೀಶ್ (27), ಸಂದ್ಯಾ (26), ಗೀತಾ (50), ಸಜೇಶ್ (26) ಗಾಯಗೊಂಡಿದ್ದಾರೆ. ಇವರನ್ನು ಮಾನಂದವಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಾಯದಿಂದ ಪಾರಾಗಿದ್ದಾರೆ. ಡಿಕ್ಕಿಯಾದ ರಭಸಕ್ಕೆ ಕಂಬ ಮುರಿದು ಬಿದ್ದಿದ್ದು, ತಂತಿ ಕೂಡ ತುಂಡಾಗಿ ಬಿದ್ದಿತ್ತು. ವಿದ್ಯುತ್ ಕಡಿತಗೊಂಡಿದ್ದ ಕಾರಣ ಮತ್ತಷ್ಟು ಅಪಾಯ ತಪ್ಪಿದಂತಾಯಿತು.
ಸೇತುವೆ ಕೆಳಗೆ ಬಿದ್ದ ಕಾರು
ಚಾಲಕನ ನಿಯಂತ್ರಣ ತಪ್ಪಿ ಸೀಗೆತೋಡು ಸೇತುವೆ ಕೆಳಗೆ ಆಲ್ಟೊ ಕಾರೊಂದು ಬಿದ್ದ ಘಟನೆಯಲ್ಲಿ ನಾಲ್ವರಿಗೆ ಗಾಯವಾಗಿದೆ. ಚೆನ್ನೈ ಮೂಲದ ಸುಮಾರು 27 ಪ್ರಾಯದ ವಿನೋದ್, ಅಜಯ್, ಸುತೇಶ್, ಹಾಗೂ ಮಣಿ ಗಾಯಗೊಂಡ ಪ್ರಯಾಣಿಕರು. ಕೇರಳದಿಂದ ಮೈಸೂರು ಕಡೆ ತೆರಳುತ್ತಿದ್ದಾಗ, ಸೀಗೆತೋಡು ಸೇತುವೆಯಲ್ಲಿ ಹಳೆಯ ಸೇತುವೆ ಕಡೆ ಕಾರು ವೇಗವಾಗಿ ಚಲಿಸಿದ ಕಾರಣ ಕಾರು ಸೇತುವೆಯಿಂದ ಸುಮಾರು 40 ಅಡಿಗಳಷ್ಟು ದೂರ ಹಾರಿ ಮಗುಚಿಕೊಂಡಿತು. ನಾಲ್ವರು ಕೂಡ ಸಣ್ಣ-ಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾದರು. ಸ್ಥಳೀಯರು ಗಾಯಾಳುಗಳನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-ಸುದ್ದಿಪುತ್ರ