ವೀರಾಜಪೇಟೆ, ಮೆ 17: ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಆದರಿಸಿ ಗರ್ಭದರಿಸಿದ ಗೋವೊಂದನ್ನು ರಕ್ಷಣೆ ಮಾಡಿದ ಘಟನೆ ಪಾಲಂಗಾಲ ಗ್ರಾಮದಲ್ಲಿ ನಡೆದಿದೆ.

ವೀರಾಜಪೇಟೆ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಂಗಾಲ ಗ್ರಾಮದ ನಿವಾಸಿಗಳಾದ ಕರಿನೆರವಂಡ ರಮೇಶ್ ಪೊನ್ನಣ್ಣ ಮತ್ತು ಪೂವಯ್ಯ ಅವರ ತೋಟದ ಬಳಿ ಮಹೀಂದ್ರ ಜೈಲೊ ಕಾರು (ಕೆಎ-14ಎನ್-2913)ರಲ್ಲಿ ಅಕ್ರಮವಾಗಿ ಗೋವುಗಳನ್ನು ಅಪರಿಚಿತರು ಸಾಗಾಟ ಮಾಡುತಿದ್ದರು ಎನ್ನಲಾಗಿದೆ. ಸಾಗಾಟ ಮಾಡುತ್ತಿದ್ದ ವಾಹನವು ನಿಯಂತ್ರಣ ತಪ್ಪಿ ತೋಟದ ಬೇಲಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾವi ವಾಹನದಲ್ಲಿ ಗೋವುಗಳು ಪ್ರಾಣ ಭಯದಿಂದ ಒಡಿಹೊಗಿವೆ. ಅಪಘಾತವಾದ ಸದ್ದು ಕೇಳಿಸಿದ ತೋಟದ ಮಾಲೀಕರು ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಹನ ತಪಾಸಣೆಗೆ ಮುಂದಾಗಿದ್ದಾರೆ. ವಾಹನದಲ್ಲಿ ಯಾವದೇ ಗೋವುಗಳು ಇಲ್ಲದಿರುವದು ಗೋಚರಿಸಿದೆ. ಆದರೆ ಅನತಿ ದೂರದಲ್ಲಿ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ನಿಯಂತ್ರಣವಿಲ್ಲದ ಹಸು ಕಾಣಿಸಿಕೊಂಡಿದೆ. ಪರಿಶೋಧನೆ ಮಾಡಿದಾಗ ಹಸು ಗರ್ಭದರಿಸಿರುವದು ಕಂಡುಬಂದಿದೆ. ವಾಹನದಲ್ಲಿ ಮೂರರಿಂದ ನಾಲ್ಕು ಹಸುಗಳು ಇದ್ದಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 11.4.9.5 ಪಶು ಸಂಗೋಪನಾ ಕಾಯ್ದೆ ಮತ್ತು 11 ಗೋ ಸಂರಕ್ಷಣಾ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾಗಾಟಕ್ಕೆ ಬಳಸಿದ್ದ ವಾಹನವನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಗಾಯಗೊಂಡ ಹಸುವಿಗೆ ವೀರಾಜಪೇಟೆ ಪಶುವೈದ್ಯ ಇಲಾಖೆ ಪರಿವೀಕ್ಷಕ ಶಿವಶಂಕರ್ ಮತ್ತು ಸಹಾಯಕ ಪಶು ವೈದ್ಯ ಕುಶಾಲ್ ಅವರುಗಳು ಸುಶ್ರೂಷೆ ನೀಡಿದ್ದು, ಹಸುವನ್ನು ಮೈಸೂರಿನ ಪಿಂಜಾರ್‍ಪೂಲ್‍ಗೆ ರವಾನಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ಗೋ ಸಂರಕ್ಷಕರು : ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ತಾಲೂಕು ಭಜರಂಗದಳ ಸಂಚಾಲಕ ವಿವೇಕ್ ರೈ ಮತ್ತು ನಗರ ಸಂಚಾಲಕ ದಿನೇಶ್ ನಾಯರ್ ಅವರುಗಳು ಪೊಲೀಸರ ಮತ್ತು ಸ್ಥಳೀಯರ ಸಹಾಯದಿಂದ ಗೋವುಗಳನ್ನು ಹುಡುಕುವ ಪ್ರಯತ್ನ ಮಾಡಿದರು. ತೋಟದ ಒಂದು ಅಂಚಿನಲ್ಲಿ ನಿಯಂತ್ರಣಗೊಂಡು ಅಸ್ವಸ್ಥವಾದ ಗೋವು ಗೋಚರಿಸಿದೆ. ಗೋವಿನ ಕೊಂಬಿಗೆ ಬಲವಾದ ಪೆಟ್ಟು ಬಿದ್ದಿದೆ ವಾಹನದಲ್ಲಿ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ವಿವೇಕ್ ರೈ ಅವರು ಅಕ್ರಮವಾಗಿ ಗೋವುಗಳ ಮಾರಾಟ ಮಾಡಲು ಜಿಲ್ಲೆಯ ವಾಹನ ಬಳಸದೇ ಇತರೆಡೆಯ ವಾಹನ ಬಳಸುತ್ತಿರುವದು ಸಾಮಾನ್ಯವಾಗಿದೆ. ಗೋ ಕಳ್ಳರಿಗೆ ಸಹಕರಿಸಲು ಸ್ಥಳೀಯರ ಕೈವಾಡವು ಇದೆಯೆಂದು ಮೆಲ್ನೋಟಕ್ಕೆ ಕಂಡುಬರುತ್ತಿದೆ. ಆರಕ್ಷಕ ಇಲಾಖೆಯು ಅಕ್ರಮವೇಸಗುವವರನ್ನು ಬಂದಿಸಿ ಕಠಿಣ ಶಿಕ್ಷೆಗೆ ಓಳಪಡಿಸಬೇಕು; ಗೋವುಗಳನ್ನು ಸಂರಕ್ಷಣೆ ಮಾಡಬೇಕು ಎಂದು ಹೇಳಿದರು.