ಗೋಣಿಕೊಪ್ಪಲು, ಮೇ 15: ವೀರಾಜಪೇಟೆ ತಾಲೂಕು ಒಕ್ಕಲಿಗರ ಯುವ ವೇದಿಕೆ ನೇತೃತ್ವದಲ್ಲಿ ಹಾತೂರು ಶಾಲಾ ಮೈದಾನದಲ್ಲಿ ಜರುಗಿದ ಮಹಿಳಾ ಹಗ್ಗಜಗ್ಗಾಟ ಫೈನಲ್ಸ್‍ನಲ್ಲಿ ಕೈಕೇರಿ ಒಕ್ಕಲಿಗರ ಯೂತ್ ಕ್ಲಬ್ ಎ ತಂಡವು ಪ್ರಶಸ್ತಿ ಗೆದ್ದುಕೊಂಡಿದೆ. ಹಾತೂರು ಮಹಿಳಾ ತಂಡವು ರನ್ನರ್ಸ್ ಪ್ರಶಸ್ತಿ ಗೆದ್ದುಕೊಂಡಿದೆ. ಕೋಟೆಕೊಪ್ಪ ಒಕ್ಕಲಿಗರ ಮಹಿಳಾ ತಂಡ, ಕೈಕೇರಿ ಒಕ್ಕಲಿಗರ ಯೂತ್ ಕ್ಲಬ್ ಬಿ ತಂಡ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.