ಶ್ರೀಮಂಗಲ, ಮೇ 16 : ಬಿರುನಾಣಿಯ ಮರೆನಾಡು ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಮರೆನಾಡ್ ಕೊಡವ ಕಪ್ ಪಂದ್ಯಾವಳಿಯಲ್ಲಿ ಅಣ್ಣಳಮಾಡ (ಬಿರುನಾಣಿ), ಕಳಕಂಡ, ಬೊಟ್ಟಂಗಡ, ಕರ್ತಮಾಡ ತಂಡಗಳು ಸೆಮಿ ಫೈನಲ್‍ಗೆ ತಲಪಿದೆ.

ಬುಧವಾರ ನಡೆದ ಕ್ವಾಟರ್ ಫೈನಲ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಅಣ್ಣಳಮಾಡ (ಬಿರುನಾಣಿ) ಹಾಗೂ ಕಾಳಿಮಾಡ ತಂಡಗಳ ನಡುವೆ ನಡೆಯಿತು. ಹತ್ತು ಓವರ್‍ಗಳ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಾಳಿಮಾಡ ತಂಡ 8 ವಿಕೆಟ್‍ಗೆ 45ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಅಣ್ಣಳಮಾಡ ತಂಡ 3 ವಿಕೆಟ್ ಕಳೆದುಕೊಂಡು 46 ರನ್ ಗಳಿಸಿ ಸೆಮಿಫೈನಲ್‍ಗೆ ತಲಪಿದೆ.

ಎರಡನೇ ಪಂದ್ಯಾವಳಿಯಲ್ಲಿ ಕಳಕಂಡ ಹಾಗೂ ನೆಲ್ಲೀರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಪಂದ್ಯದಲ್ಲಿ ಅಣ್ಣಳಮಾಡ (ಬಿರುನಾಣಿ) ಹಾಗೂ ಕಾಳಿಮಾಡ ತಂಡಗಳ ನಡುವೆ ನಡೆಯಿತು. ಹತ್ತು ಓವರ್‍ಗಳ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಾಳಿಮಾಡ ತಂಡ 8 ವಿಕೆಟ್‍ಗೆ 45ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಅಣ್ಣಳಮಾಡ ತಂಡ 3 ವಿಕೆಟ್ ಕಳೆದುಕೊಂಡು 46 ರನ್ ಗಳಿಸಿ ಸೆಮಿಫೈನಲ್‍ಗೆ ತಲಪಿದೆ.

ಎರಡನೇ ಪಂದ್ಯಾವಳಿಯಲ್ಲಿ ಕಳಕಂಡ ಹಾಗೂ ನೆಲ್ಲೀರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ವಿಕೆಟ್‍ಗೆ 72ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಕಾಯಪಂಡ ತಂಡ 7 ವಿಕೆಟ್ ಕಳೆದುಕೊಂಡು 40 ರನ್ ಗಳಿಸಿ ಪರಾಭವಗೊಂಡಿತು.

ಕೊನೆಯ ಕ್ವಾಟರ್ ಫೈನಲ್‍ನಲ್ಲಿ ಕರ್ತಮಾಡ - ಬೊಳ್ಳೇರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ತಮಾಡ ತಂಡ 5 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬೊಳ್ಳೇರ ತಂಡ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 35ರನ್ ಗಳಿಸಿ ಸೋಲು ಅನುಭವಿಸಿತು.

ಇಂದು ಸೆಮಿಫೈನಲ್ : ಗುರುವಾರ ನಡೆಯುವ ಮೊದಲ ಸೆಮಿಫೈನಲ್ ಪಂದ್ಯಾಟ (9.30 ಗಂಟೆ) ದಲ್ಲಿ ಅಣ್ಣಳಮಾಡ (ಬಿರುನಾಣಿ) - ಬೊಟ್ಟಂಗಡ, ಕಳಕಂಡ - ಕರ್ತಮಾಡ (11.00 ಗಂಟೆಗೆ) ತಂಡಗಳ ನಡುವೆ ನಡೆಯಲಿದೆ. ಫೈನಲ್ ಪಂದ್ಯ ಮಧ್ಯಾಹ್ನ 1.30 ಗಂಟೆಗೆ ನಡೆಯಲಿದ್ದು, ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ ಕೀತಿಯಂಡ ಕಾರ್ಷನ್ ಮತ್ತು ರೈಲ್ವೆ ತಂಡದ ಮಾಜಿ ಹಾಕಿ ಆಟಗಾರ ಕಾಳಿಮಾಡ ಮುತ್ತಣ್ಣ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.