ಮಡಿಕೇರಿ, ಮೇ 15: ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 2019-20ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಿಗೆ ದಾಖಲಾತಿ ಪ್ರಾರಂಭವಾಗಿದೆ.

ಕಾಲೇಜಿನಲ್ಲಿ ಲಭ್ಯವಿರುವ ಸಂಯೋಜನೆಗಳು: ಕಲಾ ಸಂಯೋಜನೆಯಲ್ಲಿ ಕನ್ನಡ, ಇಂಗ್ಲೀಷ್, ಇತಿಹಾಸ ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಕನ್ನಡ, ಇಂಗ್ಲೀಷ್, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಮತ್ತು ರಾಜ್ಯಶಾಸ್ತ್ರ.

ವಾಣಿಜ್ಯ ಸಂಯೋಜನೆ: ಕನ್ನಡ, ಇಂಗ್ಲೀಷ್, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ ಮತ್ತು ಕನ್ನಡ ಇಂಗ್ಲೀಷ್, ಅರ್ಥಶಾಸ್ತ್ರ, ಕಂಪ್ಯೂಟರ್ ಸೈನ್ಸ್, ವ್ಯವಹಾರ ಅಧ್ಯಯನ ಹಾಗೂ ಲೆಕ್ಕಶಾಸ್ತ್ರ.

ವಿಜ್ಞಾನ ಸಂಯೋಜನೆ: ಕನ್ನಡ ಇಂಗ್ಲೀಷ್, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರ ಹಾಗೂ ಕನ್ನಡ ಇಂಗ್ಲೀಷ್, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಗಣಕ ವಿಜ್ಞಾನ. ದಂಡ ಶುಲ್ಕವಿಲ್ಲದೆ ದಾಖಲಾತಿಗೆ ತಾ. 27 ಕೊನೆ ದಿನವಾಗಿದೆ. ತಾ. 28 ರಿಂದ ಜೂನ್ 12 ರವರೆಗೆ ದಂಡ ಶುಲ್ಕ ರೂ. 670 ರೊಂದಿಗೆ ದಾಖಲಾಗಲು ಹಾಗೂ ಪ್ರಥಮ ಪಿಯುಸಿ ವಿಶೇಷ ದಂಡ ಶುಲ್ಕ 2,890 ರೂ.ಗಳೊಂದಿಗೆ ದಾಖಲಾಗಲು ಜೂನ್ 13 ರಿಂದ ಜೂನ್ 24 ಕೊನೆ ದಿನವಾಗಿದೆ ಎಂದು ಮಡಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ ತಿಳಿಸಿದ್ದಾರೆ.