ಸಿದ್ದಾಪುರ ಮೇ 15: ಬೃಹತ್ ಗಾತ್ರದ ಮರವೊಂದು ದಿಢೀರನೆ ಮುಖ್ಯ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಆಟೋ ಚಾಲಕನೋರ್ವ ಅದೃಷ್ಟವಶಾತ್ ಪ್ರಾಣಾಪಾಯದಿಮದ ಪಾರಾಗಿದ್ದಾನೆ.
ಸಿದ್ದಾಪುರದ ವೀರಾಜಪೇಟೆ ರಸ್ತೆಯ ಹಳೇ ಸಿದ್ದಾಪುರದ ಬಳಿ ಅಲ್ಲಿನ ರಾಯ್‍ಗೋಡ್ ತೋಟದಿಂದ ಭಾರೀ ಗಾತ್ರದ ಮರವೊಂದು ದಿಢೀರನೆ ಮುರಿದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಈ ಸಂದರ್ಭ ಮುಖ್ಯರಸ್ತೆಯಲ್ಲಿ ಅಬ್ದುಲ್ ಲತೀಫ್ ತನ್ನ ಆಟೋ ರಿಕ್ಷಾದಲ್ಲಿ ಪ್ರಯಾಣಿಕರೊಂದಿಗೆ ಸಮೀಪದ ಅಂಬೇಡ್ಕರ್ ನಗರಕ್ಕೆ ತೆರಳುತ್ತಿದ್ದರು. ಮರ ದಿಢೀರನೆ ರಸ್ತೆ ಅಡ್ಡಲಾಗಿ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ರಾಯ್‍ಗೋಡ್ ತೋಟದ ಒಳಭಾಗದಲ್ಲಿ ನಿಲ್ಲಿಸಿದ್ದ ಕಾರಿನ ಹಿಂಬದಿಗೆ ಮರದ ಕೊಂಬೆ ಬಿದ್ದು, ಭಾಗಶಃ ಹಾನಿಯಾಗಿದೆ. ಅದೃಷ್ಟವಶಾತ್ ಯಾವದೇ ಪ್ರಾಣಹಾನಿ ಸಂಭವಿಸಿಲ್ಲ. ಮುಖ್ಯರಸ್ತೆಗೆ ಮರ ಬಿದ್ದ ಪರಿಣಾಮ ಕೆಲಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಅಲ್ಲಿನ ಸ್ಥಳೀಯರ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸಲಾಯಿತು.