ಮಡಿಕೇರಿ, ಮೇ 15: ಗೌಡ ಫುಟ್ಬಾಲ್ ಅಕಾಡೆಮಿ ಆಶ್ರಯದಲ್ಲಿ ಮರಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಗೌಡ ಕುಟುಂಬಗಳ ನಡುವಿನ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕೊಂಪುಳಿರ ತಂಡ ಪ್ರಥಮ ತಂಡವಾಗಿ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದೆ. ಕೊಳಂಬೆ, ಪರಿಚನ, ಪಾಣತ್ತಲೆ, ಚಂಡಿರ ತಂಡಗಳು ಮುನ್ನಡೆ ಸಾಧಿಸಿವೆ.
ಇಂದು ಕಲ್ಲುಮುಟ್ಲು ಹಾಗೂ ಮಡಿಕೇರಿ, ಮೇ 15: ಗೌಡ ಫುಟ್ಬಾಲ್ ಅಕಾಡೆಮಿ ಆಶ್ರಯದಲ್ಲಿ ಮರಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಗೌಡ ಕುಟುಂಬಗಳ ನಡುವಿನ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕೊಂಪುಳಿರ ತಂಡ ಪ್ರಥಮ ತಂಡವಾಗಿ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದೆ. ಕೊಳಂಬೆ, ಪರಿಚನ, ಪಾಣತ್ತಲೆ, ಚಂಡಿರ ತಂಡಗಳು ಮುನ್ನಡೆ ಸಾಧಿಸಿವೆ.
ಇಂದು ಕಲ್ಲುಮುಟ್ಲು ಹಾಗೂ ಕೊಳಂಬೆ ಉದಯ್ ಹಾಗೂ ಕವನ್ ಗೋಲು ಭಾರಿಸಿದರೆ ನಂಗಾರು ಚೇತನ್ 1 ಗೋಲು ಗಳಿಸಿದರು. ಪರಿಚನ ತಂಡ ಮೇರ್ಕಜೆ ತಂಡವನ್ನು 6-0 ಗೋಲುಗಳ ಅಂತರದಿಂದ ಸೋಲಿಸಿತು. ಪರಿಚನ ಬಿನ್ನು 3, ವೇತನ್ 2, ಬಿಪಿನ್ 1 ಗೋಲು ಗಳಿಸಿದರು.
ಮುಕ್ಕಾಟಿರ ಎ ತಂಡ ಮರದಾಳು ತಂಡವನ್ನು 2-0 ಗೋಲುಗಳಿಂದ ಸೋಲಿಸಿತು. ಮುಕ್ಕಾಟಿ ದಿಲೀಪ್ ಹಾಗೂ ಆಕಾಶ್ ಗೋಲು ಬಾರಿಸಿದರು. ಕೊಂಪುಳಿತ ತಂಡ ಕಲ್ಲುಮುಟ್ಲು ತಂಡವನ್ನು 4-0 ಗೋಲಿನಿಂದ ಸೋಲಿಸಿತು. ಕೊಂಪುಳಿ ಜಗ್ಗ 1, ಯತಿನ್ 2, ಕಿರಣ್ 1 ಗೋಲು ಬಾರಿಸಿದರು. ಮತ್ತೊಂದು ಪಂದ್ಯದಲ್ಲಿ ಪರಿಚನ ತಂಡ ಕೊಂಪುಳಿರ ಎ ತಂಡವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿತು. ಪರಿಚನ ಜಗದೀಶ 2 ಗೋಲು ಬಾರಿಸಿದರೆ, ಕೊಂಪುಳಿರ ಪುನಿತ್ 1 ಗೋಲು ಹೊಡೆದರು. ಪಾಣತ್ತಲೆ ತಂಡ ಮುಕ್ಕಾಟಿ ಎ ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸಿತು. ಪಾಣತ್ತಲೆ ವಿಕ್ರಂ 2 ಹಾಗೂ ಜಗದೀಶ 1 ಗೋಲು ಬಾರಿಸಿದರೆ, ಮುಕ್ಕಾಟಿ ದಿಲೀಪ್ 1 ಗೋಲು ಗಳಿಸಿದರು. ತೂಟೇರ ತಂಡ ಬಾರದ ಕಾರಣ ಚಂಡಿರ ತಂಡ ವಾಕ್ ಓವರ್ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.