ಕೂಡಿಗೆ,ಮೇ15: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕೂಡಿಗೆಯ ಕ್ರೀಡಾ ಪ್ರೌಢಶಾಲೆಯ ಆವರಣದಲ್ಲಿ ವಿಶೇಷ ಕ್ರೀಡಾ ಪರಿಶೀಲನಾ ಶಿಬಿರ ನಡೆಯುತ್ತಿದೆ.
ಶಿಬಿರವು ತಾ. 14 ರಿಂದ 19 ರವರೆಗೆ ನಡೆಯಲಿದ್ದು, ಕ್ರೀಡಾ ಪರಿಶೀಲನಾ ಶಿಬಿರದ ಮಾಹಿತಿಯನ್ನು ಪಡೆಯದ ವಿದ್ಯಾರ್ಥಿಗಳಿಗೆ ಅನುಕೂಲ ವಾಗುವಂತೆ ಕ್ರೀಡಾ ಸಚಿವರ ಆದೇಶದನ್ವಯ ಇಲಾಖೆ ವತಿಯಿಂದ ತರಬೇತಿ ಶಿಬಿರ ನಡೆಯುತ್ತಿದೆ. ಈ ತರಬೇತಿ ಶಿಬಿರದಲ್ಲಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ 55 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ರಾಜ್ಯದ ಕ್ರೀಡಾ ವಸತಿ ನಿಲಯ ಮತ್ತು ಕ್ರೀಡಾ ವಸತಿ ಶಾಲೆಗಳಿಗೆ ವಿದ್ಯಾರ್ಥಿಗಳ ಆಯ್ಕೆ ನಡೆಯುತ್ತಿದೆ.
ಅಥ್ಲೆಟಿಕ್ಸ್, ವಾಲಿಬಾಲ್, ಫುಟ್‍ಬಾಲ್, ಬಾಸ್ಕೆಟ್ ಬಾಲ್, ಹಾಕಿ, ಜಿಮ್ ನಾಸ್ಟಿಕ್ ವಿಭಾಗಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
ತರಬೇತಿ ಉಸ್ತುವಾರಿಯನ್ನು ಕ್ರೀಡಾ ಪ್ರೌಢಶಾಲೆಯ ಪ್ರಾಂಶುಪಾಲೆ ಕುಂತಿಬೋಪಯ್ಯ, ಶಿಬಿರಾಧಿಕಾರಿ ಡಾ.ವಸಂತ್ ಕುಮಾರ್ ಸೇರಿದಂತೆ ಎಲ್ಲಾ ವಿಭಾಗಗಳ 15ಕ್ಕೂ ಹೆಚ್ಚಿನ ರಾಜ್ಯ ಮಟ್ಟದ ತರಬೇತುದಾರರು ವಹಿಸಿಕೊಂಡಿದ್ದಾರೆ.