ವೀರಾಜಪೇಟೆ, ಮೇ 16 : ವೀರಾಜಪೇಟೆ ಬಳಿಯ ಕೆದಮುಳ್ಳೂರು ಗ್ರಾಮದ ಬೀಟಿಕಾಡು, ಬಾರಿಕ್ಕಾಡು ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಇತ್ತಿಚೇಗೆ ಮನೆಯ ಪಕ್ಕದಲ್ಲಿರುವ ಕಾಫಿ ತೋಟಕ್ಕೆ ರಾತ್ರಿ ವೇಳೆ ಐದಾರು ಕಾಡಾನೆಗಳು ದಾಳಿ ನಡೆಸಿ ಕಾಫಿ ಗಿಡ ಮತ್ತು ಬಾಳೆ ಫಸಲು ಹಾಗೂ ಅಡಿಕೆ ಗಿಡಗಳನ್ನು ನಾಶ ಮಾಡಿದ್ದು ಅರಣ್ಯ ಇಲಾಖೆ ಕಾಡಾನೆಗಳನ್ನು ಕೂಡಲೇ ಕಾಡಿಗೆ ಅಟ್ಟುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮನೆಯ ಪಕ್ಕದಲ್ಲಿಯೇ ಬಂದ ಕಾಡಾನೆ ಫಸಲು ಬಿಟ್ಟಿದ್ದ ಬಾಳೆ ಹಾಗೂ ಕಾಫಿ ಗಿಡಗಳನ್ನು ನಾಶ ಮಾಡಿರುವದರಿಂದ ಇಲಾಖೆ ಪರಿಹಾರ ಒದಗಿಸಬೇಕು. ಕಾಡಾನೆ ಹಾವಳಿಯಿಂದ ಗ್ರಾಮಸ್ಥರು ರಸ್ತೆಯಲ್ಲಿ ಓಡಾಡಲು ಭಯಬೀತರಾಗಿದ್ದು ಅರಣ್ಯ ಇಲಾಖೆ ಕೂಡಲೇ ಕ್ರಮಕೈಗೊಳ್ಳುವಂತೆ ಎಚ್ಚರಿಸಿದ್ದಾರೆ.