ನಾಪೋಕ್ಲು, ಮೇ 14: ದೇವಣಗೇರಿ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಏರ್ಪಡಿಸಲಾಗಿದ್ದ ತೆಂಗಿನಕಾಯಿಗೆ ಗುಂಡುಹೊಡೆಯುವ ಸ್ಪರ್ಧೆಯಲ್ಲಿ ಮಣವಟ್ಟೀರ ಬೋಪಣ್ಣಪೊನ್ನು ಪ್ರಥಮ ಸ್ಥಾನಗಳಿಸಿ ಟ್ರೋಫಿ ಹಾಗೂ 10000 ರೂ. ನಗದು ಬಹುಮಾನ ಗಳಿಸಿದ್ದಾನೆ. ನಾಪೋಕ್ಲುವಿನ ಸೇಕ್ರೆಡ್ ಹಾರ್ಟ್ ಆಂಗ್ಲಮಾಧ್ಯಮ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿರುವ ಬೋಪಣ್ಣ ನೆಲಜಿ ಗ್ರಾಮದ ಮಣವಟ್ಟೀರ ಪೊನ್ನು ಮತ್ತು ಸೀತಾಪೊನ್ನು ದಂಪತಿಗಳ ಪುತ್ರ. ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಮೂಕಂಡ ಬೋಪಣ್ಣ ಅವರ ಪಾಲಾಗಿದೆ. ಸ್ಪರ್ಧೆಯಲ್ಲಿ 89 ಮಂದಿ ಪಾಲ್ಗೊಂಡಿದ್ದರು.